ರಾಷ್ಟ್ರೀಯ

ಸಂಸತ್ತಿನಲ್ಲಿ ಗದ್ದಲ ವಿರೋಧಿಸಿ ಗುರುವಾರ ದಿನಪೂರ್ತಿ ಮೋದಿ ಉಪವಾಸ

Pinterest LinkedIn Tumblr


ಹೊಸದಿಲ್ಲಿ: ಸಂಸತ್ತಿನಲ್ಲಿ ಪ್ರತಿಪಕ್ಷ ಸಂಸದರು ಗದ್ದಲ, ಕೋಲಾಹಲ ನಡೆಸಿದ ಪರಿಣಾಮ 23 ದಿನಗಳ ಕಲಾಪ ವ್ಯರ್ಥವಾಗಿತ್ತು. ಇದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಬಿಜೆಪಿ ಸರಕಾರದ ವಿರುದ್ಧ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದ ಬೆನ್ನಲ್ಲೇ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ.

ಏಪ್ರಿಲ್‌ 12, ಗುರುವಾರದಂದು ಮೋದಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕೂಡ ಇದಕ್ಕೆ ಸಾಥ್‌ ನೀಡಲಿದ್ದಾರೆ. ಪ್ರಚಾರ ನಿಮಿತ್ತ ತೆರಳಲಲಿರುವ ಅಮಿತ್‌ ಶಾ ಯಾವು ಯಾವ ಊರಿನಲ್ಲಿ ಪ್ರವಾಸ ಕೈಗೊಳ್ಳುತ್ತಾರೋ ಅಲ್ಲಿಯೇ ಉಪವಾಸ ನಡೆಸಲಿದ್ದಾರೆ.

ಬಿಜೆಪಿಯ ಹಲವು ಸಂಸದರು ಕೂಡ ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಜ್ಯೋತಿಬಾ ಫುಲೆ ಅವರ ಜನ್ಮದಿನ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಸಮತಾ ದಿವಸ್‌ ಸಮಾರಂಭದಲ್ಲಿ ಪ್ರಧಾನಿ ಮೋದಿ ವೀಡಿಯೊ ಕಾನ್ಫರೆನ್ಸ್‌ ಮೂಲಕ ಬಿಜೆಪಿ ಸಂಸದರ ಜತೆ ಸಂವಾದ ನಡೆಸಲಿದ್ದಾರೆ.

Comments are closed.