ಕರ್ನಾಟಕ

ಜೈಲಿನಲ್ಲಿ ಶಶಿಕಲಾಗೆ ರಾಜಾತಿಥ್ಯ: ಸತ್ಯನಾರಾಯಣರಾವ್‌ಗೆ ತಾತ್ಕಾಲಿಕ ರಿಲೀಫ್‌

Pinterest LinkedIn Tumblr


ಬೆಂಗಳೂರು: ಎಐಡಿಎಂಕೆ ನಾಯಕಿ ಶಶಿಕಲಾಗೆ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲು 2 ಕೋಟಿ ರೂ ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿಜಿಪಿ ಸತ್ಯನಾರಾಯಣರಾವ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಪ್ರಕರಣದ ಸಂಬಂಧ ರಾವ್ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಎಸಿಬಿ ದಾಖಲಿಸಿರುವ ಎಫ್‌ಐ‌ಆರ್ ರದ್ದು ಕೋರಿ ಸತ್ಯನಾರಾಯಣ ರಾವ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದರು. ಏ.16ರ ಒಳಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಲಾಯಿತು.

ಮುಂದಿನ ವಿಚಾರಣೆಯವರೆಗೂ ಸತ್ಯನಾರಾಯಣರಾವ್ ವಿರುದ್ಧ ವಿಚಾರಣೆಗೆ ಮುಂದಾಗಂತೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏ.19ಕ್ಕೆ ಮುಂದೂಡಿದೆ.

Comments are closed.