ಕರ್ನಾಟಕ

ವಿಧಾನಸಭೆಗೆ ಶೋಭಾಗೆ ಟಿಕೆಟ್ ಇಲ್ಲ: ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು:ಮೊದಲ ಹಂತದಲ್ಲಿ 72 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಪಟ್ಟಿ ಪ್ರಕಟವಾದ ಬಳಿಕ ಯಾರಿಗೂ ಅಸಮಾಧಾನ ಇಲ್ಲ. ಯಾರಾದ್ರೂ ಆಕಸ್ಮಾತ್ ಆಗಿ ಅಸಮಾಧಾನಗೊಂಡಿದ್ದರೆ ಅಂತಹವರನ್ನು ಕರೆದು ಮಾತನಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಸೋಮವಾರ ಡಾಲರ್ಸ್ ಕಾಲೋನಿಯಿಂದ ಆಟೋದಲ್ಲಿ ಶಿವಾಜಿನಗರದತ್ತ ಹೊರಟಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಏಪ್ರಿಲ್ 11ರಂದು 60ರಿಂದ 70 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ್ಲ ಇಲ್ಲ. ಏಪ್ರಿಲ್ 19ರಂದು ತಾನು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು. ಆದರೆ ಸಂಸದರಿಗೆ ವಿಧಾನಸಭಾ ಚುನಾವಣಾ ಟಿಕೆಟ್ ಇಲ್ಲ. ಶೋಭಾ ಕರಂದ್ಲಾಜೆಗೂ ಕೂಡಾ ಟಿಕೆಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀರಾಮುಲುಗೆ ವಿಶೇಷ ಕಾರಣಗಳಿಗಾಗಿ ವಿಧಾನಸಭೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಸಂಸದರಿಗೆ ವಿಧಾನಸಭಾ ಟಿಕೆಟ್ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿರುವುದಾಗಿ ಹೇಳಿದರು.

Comments are closed.