ಕರಾವಳಿ

ಓಂ ಪಠಿಸುವುದರಿಂದಾಗುವ ಪ್ರಯೋಜನ ಬಲ್ಲಿರಾ….?

Pinterest LinkedIn Tumblr

ಭಾರತ ದೇಶದಲ್ಲಿ ವೇದಗಳ ಕಾಲದಿಂದಲು ಓಂಕಾರಕ್ಕೆ ತುಂಬಾ ಮಹತ್ವವನ್ನು ನೀಡಿದ್ದಾರೆ. ಓಂ ಕಾರವು ಈಗ ಕೇವಲ ಭಾರತದಲ್ಲಿ ಅಲ್ಲದೆ ವಿದೇಶಗಳಲ್ಲೂ ಹೆಚ್ಚಿನ ಜನರನ್ನು ಆಕರ್ಷಿಸಿದೆ ಅದಕ್ಕೆ ಕರಣ ಅದರಿಂದಾಗುವ ಆದ್ಯಾತ್ಮಿಕ ಅನುಭವ ಹಾಗು ದೊರಕುವ ಮನಶಾಂತಿಯೇ ಕಾರಣ. ಆ ಕಾರಣಗಳನ್ನು ನೀವು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ನೀವು ಪಠಣಮಾಡಿದರೆ ಅದರಿಂದ ಋಣಾತ್ಮಕ ಬದಲಾವಣೆಯನ್ನು ಪಡೆಯಬಹುದು. ಹಾಗಾದರೆ ಓಂ ಎಂದು ಪಠಿಸುವುದರಿಂದಾಗುವ ಲಾಭ ಏನೆಂದು ತಿಳಿಯೊಣಬನ್ನಿ.

ಕೋಪ ಹಾಗು ಒತ್ತಡವನ್ನು ನಿವಾರಿಸುತ್ತದೆ
ಓಂ ಪಠಿಸುವವರು ಕಾಣುವ ಮಹತ್ತರ ಬದಲಾವಣೆಯೆಂದರೆ ಅವರ ಕೋಪ ಅವರ ಕಂಟ್ರೋಲ್ ಗೆ ಬರುತ್ತದೆ ಹಾಗು ಎಷ್ಟೇ ಒತ್ತಡವಿದ್ದರೂ ಮನಶಾಂತಿ ಲಭಿಸುತ್ತದೆ. ಅಂದರೆ ಓಂ ಪಠಿಸುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ನಿಮ್ಮ ಬುದ್ದಿ ಚುರುಕುಗೊಳ್ಳುತ್ತದೆ. ನಿಮಗೆ ಮಾಡುವ ಕೆಲಸದಲ್ಲಿ ಆಸಕ್ತಿ ಮೂಡಿಸುತ್ತದೆ.

ಭಯ ಹಾಗು ಕೆಟ್ಟ ಆಲೋಚನೆಗಳನ್ನು ದೂರಮಾಡುತ್ತದೆ.
ಭಯಪಡುವುದು ಸಾಮಾನ್ಯ ಆದರೆ ಕೆಲವರಿಗೆ ಯಾವಾಗಲು ನೆಗೆಟಿವ್ ಥಿಂಕಿಂಗ್ ಅಂದರೆ ದುರಾಲೋಚನೆಗಳೇ ಕಾಡುತ್ತಿರುತ್ತದೆ, ಮನಸ್ಸಿನಲ್ಲಿ ಏನೋ ಭಯ ಹಾಗು ಕಳವಳವನ್ನು ಅನುಭವಿಸುತ್ತಿರುತ್ತಾರೆ ಅಂತವರು ಓಂ ಪಠಣ ಮಾಡಿದರೆ ಆ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು. ಮನಸ್ಸಿಗೆ ನೆಮ್ಮದಿ ತರುವುದಲ್ಲದೆ ನಿಮ್ಮ ಆಲೋಚನಶಕ್ತಿಯನ್ನು ಹೆಚ್ಚಿಸುತ್ತದೆ. ಮನಸ್ಸಿನ ಅರೋಗ್ಯ ಚೆನ್ನಾಗುತ್ತದೆ .

ಸ್ಪೈನಲ್ ಕಾರ್ಡ್ ಸಾಮರ್ಥ್ಯ ಹೆಚ್ಚುತ್ತದೆ
ದಿನವೂ ಓಂ ಮಂತ್ರವನ್ನು ಪಠಿಸುವುದರಿಂದ ಸ್ಪೈನಲ್ ಕಾರ್ಡ್ ನ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಓಂ ಶಬ್ದದಿಂದ ಉಂಟಾಗುವ ವೈಬ್ರೆಷನ್ಸ್ ಸ್ಪೈನಲ್ ಕಾರ್ಡ್ ಗೆ ತುಂಬ ಒಳ್ಳೆಯದೆಂದು ತಿಳಿದುಬಂದಿದೆ. ಈ ಅನುಕೂಲವನ್ನು ಪಡೆಯಲು ನೀವು ಒಳ್ಳೆಯ ಗುರುಗಳ ಮಾರ್ಗದರ್ಶನದಲ್ಲಿ ಪಠಣಮಾಡಬೇಕು.

ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
ದಿನವೂ ಓಂ ಪತನವನ್ನು ಅಭ್ಯಾಸಮಾಡಿದರೆ ದೇಹದಲ್ಲಿ ರಕ್ತಪರಿಚಲನೆ ಸುಗಮವಾಗಿ ಆಗುವುದಲ್ಲದೆ ಜೀವಕೋಶಗಳಿಗೆ ಅಗತ್ಯ ಆಮ್ಲಜನಕ ಪೂರೈಕೆಯಾಗುತ್ತದೆ. ಇದರಿಂದ ದೇಹದಲ್ಕ್ಲಿನ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸುಗಮವಾಗುತ್ತದೆ.

ಹೃದಯ ಹಾಗು ಜೀರ್ಣಕ್ರಿಯೆಯಾ ಕಾರ್ಯನಿರ್ವಹಣೆ ಸುಗಮವಾಗುತ್ತದೆ.
ಓಂ ಪಠಣದಿಂದ ದೇಹದಲ್ಲಿ ರಕ್ತಪರಿಚಲನೆ ಸುಗಮವಾಗುತ್ತದೆ, ಇದರಿಂದ ಹೈಪರ್ ಟೆನ್ಶನ್ ನಿಯಂತ್ರಣಕ್ಕೆ ಬರುತ್ತದೆ, ಬ್ಲಡ್ ಪ್ರೆಷರ್ ನಿಯಂತ್ರಣದಲ್ಲಿರುತ್ತದೆ . ಹಾಗೆಯೆ ಜೀರ್ಣ ಕ್ರಿಯೆ ಉತ್ತಮವಾಗುತ್ತದೆ.

ನಿದ್ರಾಹೀನತೆ ಕಡಿಮೆಯಾಗುತ್ತದೆ
ಈಗಿನ ಆಧುನಿಕ ಜೀವನಶೈಲಿಯಲ್ಲಿ ಜನರಿಗೆ ರಾತ್ರಿ ಮಲಗಿದರೆ ಸರಿಯಾಗಿ ನಿದ್ರೆಮಾಡಲಾಗುವುದಿಲ್ಲ. ಕೆಲಸದ ಒತ್ತಡ,ಹಾಗು ಇನ್ನಿತರ ಸಮಸ್ಯೆಯಿಂದ ನಿದ್ರಾಹೀನತೆ ಅನುಭವಿಸುತ್ತಾರೆ. ಓಂ ಪತನವವನ್ನು ಅಭ್ಯಸಿಸಿದರೆ ನಿದ್ರಾಹೀನತೆ ದೂರವಾಗುತ್ತದೆ.

ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಬದಲಾವಣೆಯಾಗುತ್ತದೆ
ನೀವು ಓಂ ಪತನವನ್ನು ದಿನವೂ ಅಬ್ಯಾಸಿದರೆ ನಿಮ್ಮ ಮನೆಯವಾತಾವರಣ ಋಣಾತ್ಮಕವಾಗಿ ಬದಲಾಗುತ್ತದೆ, ನೆಗೆಟಿವ್ ಥಿಂಕಿಂಗ್ ದೂರಮಾಡುತ್ತದೆ. ಓಂ ಪತನವನ್ನು ಕೇಳುವವರಿಗೂ ಮನಸ್ಸಿನಲ್ಲಿ ಚೇತನವನ್ನು ಉಂಟುಮಾಡುತ್ತದೆ.

ಈ ಮೇಲಿನ ಲಾಭಗಳನ್ನು ನೀವು ಪಡೆಯಬೇಕಾದರೆ ನೀವು ನಿರಂತರ ಅಭ್ಯಾಸ ಮಾಡಬೇಕು, ಇನ್ನೇಕೆ ತಡ ನೀವು ಕೂಡ ಓಂ ಪಠಣಮಾಡಲು ಪ್ರಾರಂಭಿಸಿ, ಬೆಳಗಿನ ಜಾವ ಪಠಣಮಾಡಲು ತುಂಬಾ ಉತ್ತಮ ಸಮಯ.

Comments are closed.