ಕರಾವಳಿ

ಮುಖದ ಅಂದ ಹೆಚ್ಚಿಸಲು ಅರಿಶಿನ ಬಳಕೆ ಮಾಡುವ ವಿಧಾನ

Pinterest LinkedIn Tumblr

ಎಲ್ಲರಿಗೂ ತಾವು ಸುಂದರವಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ. ಅದಕ್ಕಾಗಿ ಹಲವಾರು ರೀತಿಯ ಕ್ರೀಮ್. ಲೋಷನ್. ಫೇಸ್ ವಾಷ್. ಫೇಸ್ ಮಾಸ್ಕ್. ಗಳ ಮೊರೆ ಹೋಗುತ್ತಾರೆ. ಇದು ಸಾಲದೆ ಬ್ಯುಟಿ ಪಾರ್ಲರ್ ಗಳಿಗೆ ಹೋಗಿ ಹಣ ಸುರಿದು ಹಲವಾರು ರೀತಿಯ ಫೇಸ್ ವಾಷ್ ಗಳನ್ನು ಮಾಡಿಸುತ್ತಾರೆ. ಆದರೆ ಇವುಗಳಲ್ಲಿ ಹೆಚ್ಚು ಕೆಮಿಕಲ್ ಇರುತ್ತದೆ ಎಂದು ಗೊತ್ತಿದ್ದರೂ ಅದನ್ನು ಬಿಡುವುದಿಲ್ಲ. ಇವುಗಳೆಲ್ಲ ಮಾಡಿಸಿದ ನಂತರ ಸುಂದರವಾಗಿ ಕಾಣಬಹುದು ಆದರೇ ಕೇವಲ ಒಂದು ವಾರ ಅಷ್ಟೇ. ನಂತರದ ದಿನಗಳು ನಮ್ಮ ಮುಖದ ಅಂದ ಹೆಚ್ಚಾಗಿ ಅಳಗಿರುತ್ತದೆ ಏಕೆಂದರೆ ನಾವು ಕೆಮಿಕಲ್ ಮಿಶ್ರಣವನ್ನು ನಮ್ಮ ಮುಖಕ್ಕೆ ಹಾಕಿಕೊಂಡಿರುತ್ತೇವೆ.

ಆದ್ದರಿಂದ ಈ ಕೆಮಿಕಲ್ ಮಿಶ್ರಣವನ್ನು ಬಿಟ್ಟು. ನಮ್ಮ ನಿಸರ್ಗ ನಮಗೆಂದು ಕೊಟ್ಟಿರುವ ನೈಸರ್ಗಿಕ ಔಷಧಿಗಳನ್ನು ಬಳಸಿ ನಮ್ಮ ಸೌಂದರ್ಯವನ್ನು ವೃದ್ಧಿಸುವುದು ಒಳ್ಳೆಯದು.ಅದರಲ್ಲೂ ನಾವು ಒಂದು ಚಿಕ್ಕ ಸಮಸ್ಯೆಯಿಂದ ದೊಡ್ಡ ಸಮಸ್ಯೆಗಳಿಗೂ ಹೆಚ್ಚಾಗಿ ಬಳಸುವ ಅರಿಶಿನ ಇದು ಹಲವಾರು ಆರೋಗ್ಯದಾಯಕ ಅಂಶಗಳನ್ನು ಹೊಂದಿದೆ. ಆದ್ದರಿಂದ ಈ ಅರಿಷಿನವನ್ನು ನಮ್ಮ ಸೌಂದರ್ಯಕ್ಕೆ ಬಳಸುತ್ತಾ ಬಂದರೆ ನಮ್ಮ ಸೌಂದರ್ಯವು ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಸುಂದರವಾಗಿ ಕಾಣುತ್ತದೆ.

ಈ ಅರಿಶಿನವನ್ನು ನಮ್ಮ ಮುಖದ ಅಂದಕ್ಕೆ ಯಾವ ರೀತಿಯಲ್ಲಿ ಬಳಸಬಹುದು ನೋಡೋಣ ಬನ್ನಿ…

ಅರಿಶಿನ ಪುಡಿಗೆ ಸ್ವಲ್ಪ ಹಾಲಿನ ಕೆನೆ. ಹಾಗೂ ರೋಸ್ ವಾಟರ್ ಹಾಕಿ ಫೆಸ್ಟ್ ತಯಾರಿಸಿಕೊಳ್ಳಿ ಇದನ್ನು ಮುಖಕ್ಕೆ ಹಚ್ಚಿಕೊಂಡು ಅದು ಸ್ವಲ್ಪ ಒಣಗಿದ ನಂತರ ತಣ್ಣೀರಿನಲ್ಲಿ ತೊಳೆಯಿರಿ.
ಅರಿಶಿನ ಪುಡಿ. ಮೊಸರು. ಕಡೆಲೇ ಹಿಟ್ಟು ಮಿಕ್ಸ್ ಮಾಡಿ ಫೆಸ್ಟ್ ತಯಾರಿಸಿಕೊಂಡು ಮುಖ ಕತ್ತಿಗೆ ಹಚ್ಚಿಕೊಳ್ಳಿ. ನಂತರ ಅದು ಸ್ವಲ್ಪ ಬಿಗಿಯುತ್ತಿರುವಾಗ ತಣ್ಣೀರಿನಿಂದ ತೊಳೆಯಬೇಕು.
ಅರಿಶಿನ ಪುಡಿಗೆ ಸ್ವಲ್ಪ ಜೇನುತುಪ್ಪ ಹಾಗೂ ನಿಂಬೆರಸ ವನ್ನು ಹಾಕಿ ಚೆನ್ನಾಗಿ ಕಲಸಿ ನಂತರ ಅದನ್ನು ಮುಖಕ್ಕೆ ಹಚ್ಚಿಕೊಂಡು 30 ರಿಂದ 40 ನಿಮಿಷ ಅದ ನಂತರ ತೊಳೆಯಿರಿ.
ಅರಿಶಿನಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ ಮುಖಕ್ಕೆ ಹಚ್ಚಿಕೊಂಡು ಅದು ಒಣಗಿದ ನಂತರ ತೊಳೆಯಿರಿ. ಇದು ಹೆಚ್ಚಾಗಿ ಮೊಡವೆಗಳನ್ನು ನಿವಾರಣೆ ಮಾಡುತ್ತದೆ.
ಸೂರ್ಯನ ಕಿರಣಗಳಿಂದ ಮುಖ ಹಾಳಾಗಿದ್ದರೆ ಅದಕ್ಕೆ ಅರಿಶಿನ ಮತ್ತು ಟೊಮೊಟೊ ಫೆಸ್ಟ್ ಹಾಕಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬೇಕು.
ಚರ್ಮ ಹೆಚ್ಚು ಕಪ್ಪಾಗಿದ್ದರೆ ಅಲ್ಲಿಗೆ ಅರಿಶಿನ. ಮೊಟ್ಟೆಯ ಬಿಳಿ ಭಾಗ. ಆಗು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಅಚ್ಚಿಕೊಂಡು 30 ನಿಮಿಷ ಬಿಟ್ಟು ತೊಳೆಯಬೇಕು.

ಹೀಗೆ ಮಾಡುತ್ತ ಬಂದರೆ ನಿಮ್ಮ ಸೌಂದರ್ಯ ನೀವೇ ಅಚ್ಚರಿ ಪಡುವಷ್ಟು ಸುಂದರವಾಗಿ ಕಾಣುತ್ತದೆ. ಆದ್ದರಿಂದ ಕ್ರೀಮ್. ಬ್ಯುಟಿ ಪಾರ್ಲರ್ ಗಳ ಮೊರೆ ಹೋಗದೆ ಮನೆಯಲ್ಲೇ ತಯಾರಿಸಿ ಸೌಂದರ್ಯ ವೃದ್ಧಿಸಿಕೊಳ್ಳಿ

Comments are closed.