ಕರ್ನಾಟಕ

ರೆಬೆಲ್‌ ಸ್ಟಾರ್‌ ಅಂಬರೀಷ್‌ ಸೆಳೆಯುವ ಬಿಜೆಪಿ ಯತ್ನ ವಿಫ‌ಲ!

Pinterest LinkedIn Tumblr


ಮಂಡ್ಯ: ಕಾಂಗ್ರೆಸ್‌ ಶಾಸಕ ಅಂಬರೀಷ್‌ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಮುಖಂಡರು ನಡೆಸಿದ ಯತ್ನ ವಿಫ‌ಲಗೊಂಡಿದೆ.

ಆರೋಗ್ಯ ಸಮಸ್ಯೆ ವಿಚಾರ ಮುಂದಿಟ್ಟುಕೊಂಡು ಕಳೆದ ಕೆಲ ದಿನಗಳಿಂದ ಚುನಾವಣೆಯಲ್ಲಿ ಕಣಕ್ಕಿಳಿಯುವ ಕುರಿತಾಗಿ ಲೆಕ್ಕಾಚಾರಗಳನ್ನು ಮಾಡುತ್ತಿರುವ ಅಂಬರೀಷ್‌ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಲೆಕ್ಕಾಚಾರ ಹಾಕಿತ್ತು.

ಬಿಜೆಪಿ ಕೇಂದ್ರದ ಮಾಜಿ ಸಚಿವ ಬಿಜೆಪಿ ನಾಯಕ ಕೃಷ್ಣಂ ರಾಜು ಅವರನ್ನು ಹೈದರಾಬಾದ್‌ ನಲ್ಲಿ ಅಂಬರೀಷ್‌ ಅವರೊಂದಿಗೆ ಮಾತುಕತೆಗೆ ನಿಯೋಜಿಸಲಾಗಿತ್ತು. ಆದರೆ ಮಾತುಕತೆ ವೇಳೆ ಅಂಬರೀಷ್‌ ನಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ರೆಬೆಲ್‌ ಸ್ಟಾರ್‌ ‘ನಾನು ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ. ನನಗೆ ಕಾಂಗ್ರೆಸ್‌ ಪಕ್ಷ ಎಲ್ಲವನ್ನೂ ನೀಡಿದೆ. ನನಗೆ ಯಾವುದೇ ನಾಯಕರೊಂದಿಗೆ ಭಿನ್ನಾಭಿಪ್ರಾಯ ಇಲ್ಲ’ ಎಂದಿದ್ದಾರೆ.

ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರೂ ಅಂಬರೀಷ್‌ ಅವರಿಗೆ ಸ್ಪರ್ಧಿಸುವ ಕುರಿತು ಸ್ಪಷ್ಟ ನಿಧಾರ ತಿಳಿಸಲು ಗಡುವು ನೀಡಿದ್ದಾರೆ. ಭಾನುವಾರ ಸಂಜೆಯೊಳಗೆ ನಿರ್ಧಾರ ಹೈಕಮಾಂಡ್‌ಗೆ ತಿಳಿಸಬೇಕು ಎಂದಿರುವುದಾಗಿ ವರದಿಯಾಗಿದೆ.

-ಉದಯವಾಣಿ

Comments are closed.