ಕರ್ನಾಟಕ

ವರುಣಾ ವಿಜಯಕ್ಕೆ ಬಿಎಸ್‌ವೈ ಪುತ್ರನ ರಣತಂತ್ರ!; ಕೈ ಮುಖಂಡನ ಭೇಟಿ

Pinterest LinkedIn Tumblr


ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಮತ್ತು ಬಿಎಸ್‌ವೈ ಪುತ್ರ ವಿಜಯೇಂದ್ರ ನಡುವೆ ಜಿದ್ದಾಜಿದ್ದಿನ ಸ್ಪರ್ಧಾ ಕಣ ನಿರ್ಮಾಣವಾಗಿದೆ. ವಿಜಯೇಂದ್ರ ಅವರು ಗೆಲುವಿಗಾಗಿ ಭಾರಿ ರಣತಂತ್ರಗಳನ್ನುಹೂಡುತ್ತಿದ್ದುಭಾನುವಾರ ಒಂದು ಕಾಲದ ಸಿದ್ದರಾಮಯ್ಯ ರಾಜಕೀಯ ವೈರಿ ಕಾಂಗ್ರೆಸ್‌ ಮುಖಂಡ ರೇವಣಸಿದ್ದಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ವಿಜಯೇಂದ್ರ ನಂಜನಗೂಡು ರೇವಣಸಿದ್ದಯ್ಯ ಅವರ ತೋಟದ ಮನೆಯಲ್ಲಿ ಭೇಟಿಯಾಗಿ ಹೂಗುಚ್ಛ ನೀಡಿ ಆಶೀರ್ವಾದ ಪಡೆದರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ ‘ಹಿರಿಯರ ಆಶೀರ್ವಾದ ಪಡೆಯಲು ಬಂದೆ’ ಎಂದಿದ್ದಾರೆ.

ರೇವಣಸಿದ್ದಯ್ಯ ಹಿಂದೆ 2 ಬಾ ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ಇದೇ ವೇಳೆ ರೇವಣಸಿದ್ದಯ್ಯ ಅವರು ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿ ‘ನಾನು ಬಿಜೆಪಿ ಸೇರ್ಪಡೆಯಾಗುತ್ತಿಲ್ಲ’ ಎಂದೂ ತಿಳಿಸಿದ್ದಾರೆ.

-ಉದಯವಾಣಿ

Comments are closed.