ಕರ್ನಾಟಕ

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಬಿಎಸ್ವೈರಿಂದ 4 ಕೋಟಿ ಲಂಚ: ಉಗ್ರಪ್ಪ

Pinterest LinkedIn Tumblr


ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯ ಗುತ್ತಿಗೆ ನೀಡುವ ಸಂದರ್ಭ ಆಗಿನ ಸಿಎಂ ಯಡಿಯೂರಪ್ಪನವರು ನಾಲ್ಕು ಕೋಟಿ ರು. ಗಳನ್ನು ಅಂದು ಲಂಚದ ರೂಪ ದಲ್ಲಿ ಪಡೆದಿದ್ದಾರೆ. ಆದಾಯ ತೆರಿಗೆ ಇಲಾಖೆಯ ವರದಿಯಲ್ಲಿ ಬಹಿರಂಗಗೊಂಡಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಬಾಂಬ್ ಸಿಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಯನ್ನು ನೀರಾವರಿ ನಿಗಮದ ಮೂಲಕ 2007-08ರಲ್ಲಿ ಗುತ್ತಿಗೆ ನೀಡಲಾಗಿದೆ. ಯಡಿ ಯೂರಪ್ಪ ಅಧ್ಯಕ್ಷತೆಯ ನೀರಾವರಿ ನಿಗಮ ಭದ್ರಾ ಮೇಲ್ದಂಡೆ ಯೋಜನೆಯನ್ನು 1033 ಕೋಟಿ ರು.ಗೆ ಮುರುಡೇಶ್ವರ ಕಾರ್ಪೊರೇಷನ್ ಲಿಮಿಟೆಡ್‌‌‌ಗೆ ನೀಡಿತ್ತು. ಅದರ ಸಹವರ್ತಿ ಕಂಪನಿ ಆರ್‌‌ಎನ್‌ಎಸ್‌‌ಎಲ್ ಇನ್ಫ್ರಾ ಸ್ಟ್ರಕ್ಚರ್‌‌‌ನಿಂದ ಯಡಿಯೂರಪ್ಪ ಒಂದು ಕೋಟಿ ತೆಗೆದುಕೊಂಡಿದ್ದಾರೆ. ಹಣವನ್ನು ಲಂಚವಾಗಿ ತೆಗೆದುಕೊಂಡಿದ್ದಾರೆ. 2009-10 ಮತ್ತು 2010-11ರಲ್ಲಿ ತಲಾ ಒಂದು ಕೋಟಿ ಒಂದು ಕೋಟಿ ತೆಗೆದುಕೊಂಡಿದ್ದಾರೆ. 2011-12 ರಲ್ಲಿ ಎರಡು ಕೋಟಿ ಲಂಚ ತೆಗೆದು ಕೊಂಡಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದರು.

ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಗುತ್ತಿಗೆ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಿದ ವೇಳೆ ಗಮನಕ್ಕೆ ಬಂದಿದ್ದು, 2 ಕೋಟಿಗೂ ಹೆಚ್ಚಿನ ದಂಡವನ್ನು ಯಡಿಯೂರಪ್ಪಗೆ ವಿಧಿಸಿದ್ದಾರೆ. ಇದು ಯಡಿಯೂರಪ್ಪ ಭ್ರಷ್ಟಾ ಚಾರ ಮಾಡಿದ್ದಾರೆ ಎನ್ನುವುದಕ್ಕೆ ನಿದರ್ಶನ ಎಂದು ದೂರಿದರು. ಸಿದ್ದರಾಮಯ್ಯ ಸರಕಾರವನ್ನು ಪರ್ಸೆಂಟೇಜ್ ಸರಕಾರ ಎಂದ ಪ್ರಧಾನಿ, ಇದು ಎಷ್ಟು ಪರ್ಸೆಂಟ್ ಕಮೀಷನ್ ಎಂದು ಹೇಳಬೇಕು. ಅಂದಿನ ನೀರಾವರಿ ಮಂತ್ರಿಗಳು ಎಷ್ಟು ತೆಗೆದುಕೊಂಡಿದ್ದಾರೆ ಹೇಳಿ ಎಂದು ಒತ್ತಾಯಿಸಿದರು.

ಭ್ರಷ್ಟಾಚಾರ ಪ್ರತಿಬಂಧನ ಕಾಯ್ದೆ ಪ್ರಕಾರ, ರಾಜ್ಯ, ಕೇಂದ್ರ ಸರಕಾರವು ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Comments are closed.