ಕರ್ನಾಟಕ

MEP ಸೇರಿದ ನರ್ಸ್‌ ಜಯಲಕ್ಷ್ಮೀ: ಯಾವ ಕ್ಷೇತ್ರದಿಂದ ಕಣಕ್ಕೆ?

Pinterest LinkedIn Tumblr


ಬೆಂಗಳೂರು: ಬಿಜೆಪಿ ನಾಯಕ ರೇಣುಕಾಚಾರ್ಯ ವಿರುದ್ಧ ಹೋರಾಟದಲ್ಲಿ ಸುದ್ದಿಯಾಗಿ ಬಿಗ್‌ ಬಾಸ್‌, ಧಾರಾವಾಹಿಗಳಲ್ಲೂ ನಟಿಸಿದ್ದ ಜಯಲಕ್ಷ್ಮೀ ಅವರು ಶುಕ್ರವಾರ ಮಹಿಳಾ ಎಂಪವರ್‌ವೆುಂಟ್‌ ಪಕ್ಷ ಸೇರ್ಪಡೆಯಾಗಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಖ್‌ ಅವರು ಲೀಲಾ ಪ್ಯಾಲೇಸ್‌ನಲ್ಲಿ ನಡೆದ ಸಮಾರಂಭದಲ್ಲಿ ಜಯಲಕ್ಷ್ಮೀ ಅವರನ್ನು ಬರ ಮಾಡಿಕೊಂಡರು. ಇನ್ನು ಜಯಲಕ್ಷ್ಮೀ ಅವರು ಪಕ್ಷದ ರಾಜ್ಯ ನಾಯಕಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಘೋಷಿಸಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರು ಎಇಪಿ ಸೇರ್ಪಡೆಯಾಗಲಿದ್ದಾರೆ.ರಾಜ್ಯದ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ನೌಹೀರಾ ತಿಳಿಸಿದರು.

ಜಯಲಕ್ಷ್ಮೀ ಅವರು ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್‌ ಅಹಮದ್‌ ಖಾನ್‌ ಅವರು ಎದುರು ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

-ಉದಯವಾಣಿ

Comments are closed.