ಕರ್ನಾಟಕ

ಏ.15ರ ಮೋದಿ ಸಮಾವೇಶವನ್ನು ಎಲ್ಲರೂ ತಡೆಯಬೇಕು: ಜಿಗ್ನೇಶ್‌ ಮೇವಾನಿ

Pinterest LinkedIn Tumblr


ಶಿವಮೊಗ್ಗ: ಸಂವಿಧಾನ ಉಳಿಸುವುದಕ್ಕಾಗಿ ಕೋಮುವಾದಿ ಶಕ್ತಿಗಳನ್ನು ತಡೆಯಲೇಬೇಕಾಗಿದೆ. ಏಪ್ರಿಲ್‌ 15ರಂದು ಬೆಂಗಳೂರಿನಲ್ಲಿ ನಡೆಯುವ ಪ್ರಚಾರ ಸಮಾವೇಶಕ್ಕೆ ಎಲ್ಲರೂ ವಿರೋಧಿಸಬೇಕು ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ತಿಳಿಸಿದ್ದಾರೆ.

ನಗರದ ಎನ್ ಡಿವಿ ಮೈದಾನದಲ್ಲಿ ನಡೆದ ಸಂವಿಧಾನ ಉಳಿವಿಗಾಗಿ ಸಂಕಲ್ಪ ಸಮಾವೇಶದಲ್ಲಿ ಭಾಷಣ ಮಾಡಿದರು.

ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವ ಚುನಾವಣಾ ಪ್ರಚಾರ ಕಾರ್ಯಕ್ಕೆ ರಾಜ್ಯದ ಎಲ್ಲ ಪ್ರಗತಿಪರರು, ದಲಿತರು ಮತ್ತು ಹಿಂದುಳಿದವರು ಒಗ್ಗೂಡಿ ವಿರೋಧಿಸಬೇಕು. 2 ಕೋಟಿ ಉದ್ಯೋಗ ಮತ್ತು ಬಡವರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವಂತೆ ಮೋದಿಗೆ ಸವಾಲು ಹಾಕಬೇಕು ಎಂದರು

ಧ್ವನಿ ಅಡಗಿಸುವುದಕ್ಕಾಗಿ ನಾಲ್ಕೈದು ಜನ ಕಪ್ಪು ಬಾವುಟ ತೋರಿ ಪ್ರತಿಭಟಿಸಿದಂತಲ್ಲ. ಸಾಗರದೋಪಾದಿಯಲ್ಲಿ ಮೋದಿ ಅವರನ್ನು ಎದುರಿಸಬೇಕು ಎಂದರು

ಬಿಜೆಪಿ ಮತ್ತು ಸಂಘ-ಪರಿವಾರ ದೇಶದ ಸಂವಿಧಾನವನ್ನು ಒಪ್ಪುವುದಿಲ್ಲ. ಕಾರ್ಪೊರೇಟ್‌ ಗಣರಾಜ್ಯ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಜಿಗ್ನೇಶ್‌ ಮೇವಾನಿ ದೂರಿದರು.

Comments are closed.