ರಾಷ್ಟ್ರೀಯ

ತನ್ನದೇ ಪರ್ಯಾಯ ಕರೆನ್ಸಿ ಪರಿಚಯಿಸಲು ಆರ್‌ಬಿಐ ಚಿಂತನೆ

Pinterest LinkedIn Tumblr


ದೆಹಲಿ: ತನ್ನದೇ ಆದ ಡಿಜಿಟಲ್ ಕರೆನ್ಸಿ ತರಲು ಚಿಂತಿಸುತ್ತಿರುವುದಾಗಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ) ತಿಳಿಸಿದೆ.

ಎರಡು ದಿನಗಳ ಮಟ್ಟದ ಹಣಕಾಸು ನೀತಿ ಸಮಿತಿ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತ ನಾಡಿದ ಆರ್‌ಬಿಐ ಉಪ ಗವರ್ನರ್‌ ಬಿ.ಪಿ.ಕನುಂಗೋ, “ಕೇಂದ್ರ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿಯನ್ನು ಚಾಲ್ತಿಗೆ ತರುವ ನಿಟ್ಟಿನಲ್ಲಿ ಹೆಚ್ಚಿನ ಕೇಂದ್ರ ಬ್ಯಾಂಕ್‌ಗಳು ಚರ್ಚೆ ನಡೆಸುತ್ತಿವೆ. ಈ ವಿಚಾರವಾಗಿ, ಸಾಧಕ ಬಾಧಕಗಳನ್ನು ಚರ್ಚಿಸಲು ಅಂತರ್‌-ವಿಭಾಗಿಯ ಗುಂಪನ್ನು ರಚಿಸಲಾಗಿದೆ” ಎಂದು ತಿಳಿಸಿದ್ದಾರೆ. ಜೂನ್‌ ಅಂತ್ಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ. ಪರ್ಯಾಯ ಕರೆನ್ಸಿ ಮೂಲಕ ಡೀಲಿಂಗ್‌ ಮಾಡಿಕೊಂಡು ಯಾವುದೇ ಸೇವೆಗಳನ್ನು ನೀಡದಿರಲು ಎಲ್ಲ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ.

“ಬಿಟ್ ಕಾಯಿನ್‌ ಸೇರಿದಂತೆ ಪರ್ಯಾಯ ಕರೆನ್ಸಿಗಳ ಕುರಿತಂತೆ ಬಳಕೆದಾರರು ಹಾಗು ವ್ಯಾಪಾರಿಗಳಿಗೆ ಆರ್‌ಬಿಐ ಎಚ್ಚರಿಕೆ ರವಾನೆ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪರ್ಯಾಯ ಕರೆನ್ಸಿಗಳ ಮೂಲಕ ಯಾವುದೇ ಸೇವೆಗಳನ್ನು ಒದಗಿಸದಿರಲು ಆರ್‌ಬಿಐ ಅಡಿ ಬರುವ ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಇಂಥ ಸೇವೆಗಳನ್ನು ನೀಡುತ್ತಿರುವವರು ಶೀಘ್ರವೇ ನಿಲ್ಲಿಸಬೇಕಿದೆ” ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

Comments are closed.