ಕರ್ನಾಟಕ

ಮುಂದಿನ ಸರ್ಕಾರ ಬರುವವರೆಗೂ ನಾನೇ ಮಂತ್ರಿ: ಜಿಲ್ಲಾಧಿಕಾರಿ ಸಿಂಧೂರಿ ವಿರುದ್ಧ ಸಚಿವ ಮಂಜು ಗರಂ

Pinterest LinkedIn Tumblr


ಹಾಸನ : ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೋಟಿಸ್​ ಜಾರಿ ಮಾಡಿದ್ದರ ವಿರುದ್ಧ ಉಸ್ತುವಾರಿ ಸಚಿವ ಎ.ಮಂಜು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಸರ್ಕಾರ ಬರುವವರೆಗೂ ನಾನೇ ಮಂತ್ರಿ. ಇಲಾಖೆ ಕಡತ ನೋಡಲು ಈಗಲೂ ಅಧಿಕಾರವಿದೆ. ನನಗೆ ಇನ್ನೂ ನೋಟಿಸ್​ ಸಿಕ್ಕಿಲ್ಲ. ಇದೆಲ್ಲ ಉದ್ದೇಶಪೂರ್ವಕವಾಗಿಯೇ ಮಾಡುತ್ತಾರೆ ಎಂಬುದು ತಿಳಿದಿದೆ ಎಂದು ಹೇಳಿದ್ದಾರೆ.

ಡಿಸಿ, ಎಡಿಸಿ, ಸಿಇಒ ಇವರೆಲ್ಲ ನನ್ನ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳು. ನಾನು ವಿದ್ಯಾವಂತ. ಏನು ಮಾಡಬೇಕು. ಮಾಡಬಾರದು ಎಂಬುದು ತಿಳಿದಿದೆ. ನೋಟಿಸ್​ ಸಿಕ್ಕ ಬಳಿಕ ಅದರಲ್ಲಿ ಏನಿದೆ ಎಂದು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಮೂವರು ಯುವತಿಯರು ಸಚಿವರ ಕಚೇರಿಯಲ್ಲಿ ಬೀಗ ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಅಧಿಕಾರಿಗಳು ಎಷ್ಟೇ ಬಾಗಿಲು ತೆಗೆಸಲು ಯತ್ನಿಸಿದರೂ ತೆಗೆದಿರಲಿಲ್ಲ. ಈ ನಿಮಿತ್ತ ಜಿಲ್ಲಾಧಿಕಾರಿ ನೋಟಿಸ್​ ಜಾರಿ ಮಾಡಿದ್ದರು.

Comments are closed.