ರಾಷ್ಟ್ರೀಯ

ಕಾವೇರಿಗಾಗಿ ಹೋರಾಟ:ಸ್ಟಾಲಿನ್‌ ವಶಕ್ಕೆ;ಎಪ್ರಿಲ್‌ 5ಕ್ಕೆ ತ.ನಾ ಬಂದ್‌

Pinterest LinkedIn Tumblr


ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಡಿಎಂಕೆ ಅದ್ಯಕ್ಷ ಸ್ಟಾಲಿನ್‌ ಅವರು ಎಪ್ರಿಲ್‌ 5 ರಂದು ತಮಿಳುನಾಡು ಬಂದ್‌ಗೆ ಕರೆ ನೀಡಿ ಹೋರಾಟ ಆರಂಭಿಸಿದ್ದಾರೆ.

ಇಂದು ನೂರಾರು ಮಂದಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಸ್ಟಾಲಿನ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಧಾನಿ ಎಪ್ರಿಲ್‌ 5 ರಂದು ತಮಿಳುನಾಡು ಪ್ರವಾಸದಲ್ಲಿರಲಿದ್ದು ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಸ್ಟಾಲಿನ್‌ ಕರೆ ನೀಡಿದ್ದಾರೆ. ನಮ್ಮ ಹೋರಾಟಕ್ಕೆ ಆಡಳಿತ ಪಕ್ಷ ಎಐಎಡಿಎಂಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಎಐಎಡಿಎಂಕೆ ಕೂಡ ಎಪ್ರಿಲ್‌ 3 ರಂದು ರಾಜ್ಯಾಧ್ಯಂತ ಉಪವಾಸ ಸತ್ಯಾಗ್ರಹವನ್ನು ನಡೆಸಲು ಕರೆ ನೀಡಿದೆ.

-ಉದಯವಾಣಿ

Comments are closed.