ಕರ್ನಾಟಕ

ಪ್ರಜ್ವಲ್ ರೇವಣ್ಣ ಲೋಕಸಭೆ ಚುನಾವಣೆ ಅಭ್ಯರ್ಥಿ

Pinterest LinkedIn Tumblr


ಹಾಸನ: ಪ್ರಜ್ವಲ್ ರೇವಣ್ಣ ಮುಂದಿನ ಲೋಕಸಭೆ ಚುನಾವಣೆ ಅಭ್ಯರ್ಥಿ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಹೇಳಿದ್ದಾರೆ.

ಪ್ರಜ್ವಲ್‌ ವಿದ್ಯಾವಂತ,ಬುದ್ದಿವಂತ‌ .ನನಗೂ 85 ವರ್ಷ.ಹೋರಾಟದ ಛಲ ಇದೆ. ಆದರೆ ವ್ಹೀಲ್ ಚೇನಲ್ಲಿ ಸಂಸತ್‌ಗೆ ಹೋಗಲು ಬಯಸುವುದಿಲ್ಲ, ಪ್ರಜ್ವಲ್ ಗೆ ಮಾರ್ಗದರ್ಶನ ಮಾಡುತ್ತೇನೆ ಎಂದು ದೇವೇಗೌಡ ತಿಳಿಸಿದರು.

ದೇವೇಗೌಡ ಅವರ ಕುಟುಂಬದಿಂದ ಪ್ರಜ್ವಲ್‌ ಅವರ ರಾಜಕೀಯ ಪ್ರವೇಶವು ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿತ್ತು. ಪ್ರಜ್ವಲ್‌ ಅವರನ್ನು ರಾಜಕೀಯವಾಗಿ ಬೆಳೆಯಲು ಅವಕಾಶ ನೀಡಲಾಗುತ್ತಿಲ್ಲ ಎಂಬುದಾಗಿ ಈಗ ಕಾಂಗ್ರೆಸ್‌ ಸೇರಿರುವ ಜೆಡಿಎಸ್‌ನ ಮಾಜಿ ಬಂಡಾಯ ಶಾಸಕರಾದ ಜಮೀರ್‌ ಅಹ್ಮದ್‌ ಮತ್ತು ಚಲುವರಾಯ ಸ್ವಾಮಿ ಟೀಕಿಸುತ್ತಿದ್ದರು.

Comments are closed.