ಅಂತರಾಷ್ಟ್ರೀಯ

ವಧುವಿಗೆ ಅಪರಿಚಿತರಿಂದ ಶುಭಾಶಯ ಪತ್ರ

Pinterest LinkedIn Tumblr


ಮದುವೆಯ ಗಡಿಬಿಡಿಯಲ್ಲಿರುವ ವಧುವೊಬ್ಬಳಿಗೆ ತನಗೆ ಯಾರೆಂದೇ ಗೊತ್ತಿರದ ವ್ಯಕ್ತಿಯೊಬ್ಬರು ಶುಭ ಕೋರಿ ಉಡುಗೊರೆ ನೀಡಿದರೆ ಹೇಗಿರುತ್ತದೆ? ಈ ರೀತಿಯ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಕಾಸಂದ್ರ ವಾರೆನ್‌ ಎಂಬ ಮಹಿಳೆಗೆ ಆಕೆಯದ್ದೇ ಮದುವೆ ಆಮಂತ್ರಣ ಪತ್ರ ಅಂಚೆ ಮೂಲಕ ಬಂದಿತು. ಆಕೆ ವಿಳಾಸ ತಪ್ಪಾಗಿರಬಹುದು. ಆದ್ದರಿಂದ ವಾಪಸ್ಸು ಬಂದಿದೆ ಎಂದು ಗ್ರಹಿಸಿ ಆ ಆಮಂತ್ರಣವನ್ನು ತೆಗೆದು ನೋಡದೇ ಸುಮ್ಮನಾದಳು. ಕೆಲ ದಿನಗಳ ಬಳಿಕ ಆ ಕರೆಯೋಲೆಯನ್ನು ಆಕೆಯ ಭಾವಿ ಪತಿ ತೆರೆದು ನೋಡಿದಾಗ ಇಬ್ಬರಿಗೂ ಆಶ್ಚರ್ಯ ಕಾದಿತ್ತು. ಆಮಂತ್ರಣದಲ್ಲಿ ಪುಟ್ಟದಾದ ಟಿಪ್ಪಣಿ ಇತ್ತು. ಅದರಲ್ಲಿ “ನೀನು ನನಗೆ ಪರಿಚಿತಳಿರಬೇಕಿತ್ತು. ನಾನು ನಿನ್ನ ಮದುವೆಗೆ ಬಂದು ಮಜಾ ಮಾಡುತ್ತಿದ್ದೆ. ನಿನಗೆ ಅಭಿನಂದನೆಗಳು. ನನಗೆ ಮದುವೆಯಾಗಿ 40 ವರ್ಷ‌ಗಳಾಗಿವೆ. ವಯಸ್ಸು ಕಳೆದಂತೆ ದಾಂಪತ್ಯವೂ ಕಳೆಗಟ್ಟಿದೆ’ ಎಂದು ಬರೆಯಲಾಗಿತ್ತು. ಜೊತೆಗೆ 20 ಡಾಲರ್‌ ನೋಟನ್ನು ಇರಿಸಲಾಗಿತ್ತು. ಆಗಲೇ ಕಾಸಂದ್ರಗೆ ತಿಳಿದದ್ದು, ಆಕೆ ತನ್ನ ಚಿಕ್ಕಮ್ಮನಿಗೆ ಕಳಿಸಲು ಬರೆದ ವಿಳಾಸ ತಪ್ಪಾಗಿ, ಅಪರಿಚಿತನಿಗೆ ತಲುಪಿದೆ ಎಂದು. ಕೊನೆಗೆ ಆಕೆ ಆ ತಪ್ಪಾದ ವಿಳಾಸಕ್ಕೆ ಪತ್ರ ಬರೆದು ಧನ್ಯವಾದ ತಿಳಿಸಿದಳಂತೆ.

-ಉದಯವಾಣಿ

Comments are closed.