ಕರ್ನಾಟಕ

ಹಣಕ್ಕಾಗಿ ಬೆದರಿಕೆ: ಪೇದೆಗಳ ಬಂಧನ

Pinterest LinkedIn Tumblr


ಬೆಂಗಳೂರು: ಬ್ಯೂಟಿ ಪಾರ್ಲರ್ ಗೆ ನುಗ್ಗಿ ಹಣಕ್ಕಾಗಿ ಬೆದರಿಕೆ ಹಾಕಿದ ಆರೋಪ ದ ಮೇಲೆ ಇಬ್ಬರು ಕಾನ್‍ಸ್ಟೇಬಲ್‍ಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣೂರು ಠಾಣೆಯ ಕಾನ್‍ಸ್ಟೇಬಲ್‍ಗಳಾದ ವಿಠ್ಠಲ್ ಮತ್ತು ಶಾರುಕ್ ಬಂಧಿತರು ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕಾನ್‍ಸ್ಟೇಬಲ್‍ಗಳು ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯೂಟಿಪಾರ್ಲರ್ ಗೆ ರಾತ್ರಿ ದಾಳಿ ನೆಪದಲ್ಲಿ ಅಲ್ಲಿದ್ದವರನ್ನು ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪಾರ್ಲರ್ ನವರು ಬಾಣಸವಾಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿ ಇಬ್ಬರು ಕಾನ್‍ಸ್ಟೇಬಲ್‍ಗಳನ್ನು ಬಂಧಿಸಲಾಗಿದೆ.

Comments are closed.