ಕರ್ನಾಟಕ

ಧಾರವಾಡ ಬಿಜೆಪಿ ಕಚೇರಿಗೆ ವಾಮಾಚಾರ? ಬೊಟ್ಟಿಟ್ಟ ಗೊಂಬೆ ಪತ್ತೆ

Pinterest LinkedIn Tumblr


ಧಾರವಾಡ: ನಗರದ ಹೃದಯ ಭಾಗದಲ್ಲಿರುವ ಸುಭಾಷ್‌ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗೊಂಬೆಯೊಂದು ನೇತು ಹಾಕಲಾಗಿದ್ದು ವಾಮಾಚಾರ ಮಾಡಿಸಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.

ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಗೊಂಬೆ ಕಚೇರಿಯ ಎದುರಿನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಬಿಜೆಪಿ ಜಿಲ್ಲಾಧ್ಯಕ್ಷರು ಧಾರವಾಡ ನಗರ ಠಾಣೆಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಚೇರಿಯ ಸುತ್ತಲಿರುವ ಕಟ್ಟಡಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ರಾತ್ರಿ 12 ಗಂಟೆಯ ಬಳಿಕ ಯಾರೋ ಗೊಂಬೆಯನ್ನು ಇರಿಸಿ ಹೋಗಿದ್ದಾರೆ ಎಂದು ಹೇಳಲಾಗಿದೆ.

-ಉದಯವಾಣಿ

Comments are closed.