ಅಂತರಾಷ್ಟ್ರೀಯ

ಅಮೆರಿಕ ವಿಮಾನ ನಿಲ್ದಾಣದಲ್ಲಿ ಪಾಕ್ ಪ್ರಧಾನಿಗೆ ಅಪಮಾನ

Pinterest LinkedIn Tumblr


ನ್ಯೂಯಾರ್ಕ್‌: ಪಾಕಿಸ್ತಾನದ ಪ್ರಧಾನಿ ಶಹೀದ್‌ ಅಬ್ಬಾಸಿ ಅವರಿಗೆ ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಅವಮಾನವಾಗಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಜಾನ್‌ ಎಫ್‌ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಪ್ರಧಾನಿ ಅಬ್ಬಾಸಿ ಅವರ ಮೇಲಂಗಿ, ಶೂ ತೆಗೆಯಿಸಿ ತಪಾಸಣೆ ನಡೆಸಿದ್ದಾರೆ ಎಂದು ಪಾಕ್‌ ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಡಿಯೋ ತುಣುಕು ಸಹ ವೈರಲ್‌ ಆಗಿದೆ. ಅಬ್ಬಾಸಿ ಕೈಯಲ್ಲಿ ಕೋಟ್‌ ಮತ್ತು ಸೂಟ್ಕೇಸ್‌ ಹಿಡಿದುಕೊಂಡು ತೆರಳು ತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಪಾಕ್‌ ಪ್ರಧಾನಿ ಅಮೆರಿಕಾಗೆ ಭೇಟಿ ನೀಡಿದ್ದರು. ಆ ವೇಳೆ ಉಪ ಪ್ರಧಾನಿ ಮೈಕ್ ಪೆನ್ಸ್‌‌ ಅವರನ್ನ ಪಾಕ್‌‌ ಪ್ರಧಾನಿ ಭೇಟಿ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ಅಮೆರಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments are closed.