ಕರ್ನಾಟಕ

ಸಿಎಂ ಪೂರ್ಣಾವಧಿ: ಡಿ.ದೇವರಾಜ ಅರಸ್ ನಂತರ ಸಿದ್ದರಾಮಯ್ಯ!

Pinterest LinkedIn Tumblr


ಬೆಂಗಳೂರು: ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದ ರಾಜ್ಯದ ಮುಖ್ಯ ಮಂತ್ರಿಯೆಂಬ ಗೌರವಕ್ಕೆ ಸಿದ್ದರಾಮಯ್ಯ ಭಾಜನರಾಗಲಿದ್ದಾರೆ. ಇದಕ್ಕೂ ಮುನ್ನ 40 ವರ್ಷಗಳ ಹಿಂದೆ ಡಿ.ದೇವರಾಜ ಅವರು ಅವಧಿ ಪೂರ್ಣಗೊಳಿಸಿದ ಸಿಎಂ. ಮುಂದಿನ ಮೇ.12ಕ್ಕೆ ನಡೆಯಲಿದ್ದು, ಸಿದ್ದರಾಮಯ್ಯ ಅಧಿಕಾರ ಅವಧಿ ಮೇ.28ರಂದು ಪೂರ್ಣಗೊಳ್ಳಲಿದೆ. ಸಿದ್ದರಾಮಯ್ಯ 2013 ಮೇ ಯಲ್ಲಿ ಅಧಿಕಾರ ಸ್ವೀಕರಿಸಿದ್ದರು.

ಸಿದ್ದರಾಮಯ್ಯ ಅವರಂತೆ ಮೈಸೂರಿನವರೇ ಆಗಿದ್ದ ಡಿ.ದೇವರಾಜು ಅರಸು ಅವರು, 1972ರಿಂದ 1977ರ ವರೆಗೆ ಅಧಿಕಾರ ನಡೆಸಿದ್ದರು. ಉಚ್ಛಾಟನೆಗೊಂಡ ಹಿನ್ನೆಲೆಯಲ್ಲಿ ಅರಸು ಅವರು 1980ರಲ್ಲಿ ರಾಜೀನಾಮೆ ನೀಡಿದ ಕಾರಣ ಅವರ ಎರಡನೇ ಹಂತದ ಅಧಿಕಾರಾವಧಿ ಕಡಿತ ಗೊಂಡಿತ್ತು. ಅವರ ಉತ್ತರಾಧಿ ಕಾರಿಯಾಗಿ ಆರ್.ಗುಂಡೂರಾವ್ ಅಧಿಕಾರ ಸ್ವೀಕರಿಸಿ ದ್ದರು.

ಕರ್ನಾಟಕ 19 ಸರಕಾರಗಳನ್ನು ಕಂಡಿದೆ. ನಾಲ್ಕು ಅವಧಿಗಳಲ್ಲಿ ರಾಷ್ಟ್ರಪತಿ ಆಡಳಿತ ಕ್ಕೆ ಒಳಗಾಗಿದೆ. ಏಕೈಕ ಮುಖ್ಯಮಂತ್ರಿ ಎಂದರೆ ಎಸ್.ಎಂ.ಕೃಷ್ಣ ಅವರು ಸ್ಥಿರ ಸರಕಾ ರವನ್ನು (1999-2004) ಮುಂದುವರಿಸುತ್ತಿದ್ದರೂ, ಅವಧಿ ಮುಗಿಯುವುದಕ್ಕೆ ಐದು ತಿಂಗಳು ಮುನ್ನವೇ ಚುನಾವಣೆ ಎದುರಿಸಲು ನಿರ್ಧರಿಸಿದ್ದರು.

Comments are closed.