ಕರ್ನಾಟಕ

ಕನ್ನಡದಲ್ಲಿ ಐಪಿಎಲ್: ನಟ ಶಿವಣ್ಣ ರಾಯಭಾರಿ

Pinterest LinkedIn Tumblr


ಬೆಂಗಳೂರು: ಸ್ಟಾರ್‌ ನೆಟವರ್ಕ್‌ನ ಸ್ಟಾರ್‌‌ ಸ್ಪೋರ್ಟ್‌‌ ಕನ್ನಡದಲ್ಲಿ ಪ್ರಸಾರ ವಾಗಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ರಾಯಭಾರಿಯಾಗಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಆಯ್ಕೆಯಾಗಿದ್ದಾರೆ.

ಸ್ಟಾರ್‌ ಇಂಡಿಯಾ ಮೊದಲ ಸಲ ನಾಲ್ಕು ಪ್ರಾದೇಶಿಕ ಭಾಷೆಗಳಾದ ತಮಿಳು, ತೆಲಗು, ಬಂಗಾಳಿ ಹಾಗೂ ಕನ್ನಡದಲ್ಲಿ ಚಾನೆಲ್‌ ಪ್ರಸಾರ ಮಾಡಲು ಮುಂದಾ ಗಿದೆ. ಜತೆಗೆ ಐಪಿಎಲ್‌ ಪ್ರಸಾರ ಮಾಡಲು ಸಹ ಅವು ಮುಂದಾಗಿವೆ. ಹೀಗಾಗಿ, ಕನ್ನಡದ ರಾಯಭಾರಿ ಯಾಗಿ ನಟ ಶಿವರಾಜ್‌ ಕುಮಾರ್‌ ಆಯ್ಕೆಯಾಗಿದ್ದಾರೆ.

ಇನ್ನು ತಾವು ರಾಯಭಾರಿಯಾಗಿ ಆಯ್ಕೆಗೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್‌ ಕುಮಾರ್‌, ನಾನು ಕ್ರಿಕೆಟ್‌ ಉತ್ಸಾಹಿಯಾಗಿದ್ದು, ಬಾಲ್ಯದಿಂದಲೂ ಕ್ರಿಕೆಟ್‌ ಆಡುತ್ತಲೇ ಬಂದಿರುವೆ. ಜತೆಗೆ ವಿವೋ ಐಪಿಎಲ್‌ ಪ್ರತಿ ವರ್ಷ ನೋಡುತ್ತಿರುವ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಸ್ಟಾರ್‌‌ ಇಂಡಿಯಾ ಜೊತೆಗಿನ ಸಹಯೋಗದ ಬಗ್ಗೆ ನಾನು ಉತ್ಸುಕನಾಗಿರುವೆ.

ಜತೆಗೆ ನನ್ನ ಮಾತೃಭಾಷೆಯಲ್ಲಿ ಕ್ರಿಕೆಟ್‌‌ ಪಂದ್ಯ ನೋಡಿ ಆನಂದಿಸಲು ಮುಂದಾಗಿರುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ತಮಿಳು ಭಾಷೆಗೆ ನಟಿ ಭಾವನಾ ಬಾಲಕೃಷ್ಣನ್‌ ಆಯ್ಕೆಗೊಂಡಿದ್ದು, ಮೊದಲ ಮಹಿಳಾ ರಾಯಭಾರಿಯಾಗಿದ್ದಾರೆ.

Comments are closed.