ರಾಷ್ಟ್ರೀಯ

ಬ್ಯಾಂಕ್ ಗಳಿಗೆ ಸರಣಿ ರಜೆ ಇಲ್ಲ, ವದಂತಿ ನಂಬಬೇಡಿ; ಫ್ರಾನ್ಕೋ

Pinterest LinkedIn Tumblr


ನವದೆಹಲಿ: ಬ್ಯಾಂಕ್ ಗಳಿಗೆ ಮಾರ್ಚ್ 29ರಿಂದ ಐದು ದಿನಗಳ ಕಾಲ ಸರಣಿ ರಜೆ ಇದೆ ಎಂಬ ಸಾಮಾಜಿಕ ಜಾಲತಾಣದ ಸುದ್ದಿಗಳನ್ನು ನಂಬಬೇಡಿ. ಮಾರ್ಚ್ 31ರಂದು ಪಬ್ಲಿಕ್ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳು ಕಾರ್ಯನಿರ್ವಹಿಸಲಿದೆ ಎಂದು ಎಚ್ ಡಿಎಫ್ ಸಿ ಬ್ಯಾಂಕ್ ನ ವಿಶಾಲ್ ಕಾಲಿಯಾ ತಿಳಿಸಿದ್ದಾರೆ.

ಮಾರ್ಚ್ 29ರಂದು ಮಹಾವೀರ ಜಯಂತಿ, ಮಾ.30 ಗುಡ್ ಫ್ರೈಡೆ ರಜೆ ಇದೆ. ಆದರೆ ಮಾರ್ಚ್ 31ರಂದು ಬ್ಯಾಂಕ್ ಗಳು ಕಾರ್ಯನಿರ್ವಹಿಸಲಿವೆ. ಅಲ್ಲದೇ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶನಿವಾರ ಆದಾಯ ತೆರಿಗೆ ಇಲಾಖೆ ಕಾರ್ಯನಿರ್ವಹಿಸಲಿದೆ. ಏಪ್ರಿಲ್ 2ರಂದು ಬ್ಯಾಂಕ್ ಗೆ ರಜೆ(ವಾರ್ಷಿಕ ಲೆಕ್ಕಪತ್ರ ದಿನ) ಎಂದು ಹೇಳಿದ್ದಾರೆ.

ಆಲ್ ಇಂಡಿಯಾ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಥೋಮಸ್ ಫ್ರಾನ್ಕೋ ರಾಜೇಂದ್ರ ದೇವ್ ಕೂಡಾ, ಮಾರ್ಚ್ 31ರಂದು ಬ್ಯಾಂಕ್ ಗಳು ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ ಬ್ಯಾಂಕ್ ಗಳಿಗೆ ಸರಣಿ ರಜೆ ಇಲ್ಲ ಎಂದು ಹೇಳಿದರು.

-ಉದಯವಾಣಿ

Comments are closed.