ಅಂತರಾಷ್ಟ್ರೀಯ

ಜೆಡಿಯು ಕೂಡ ನಮ್ಮ ಗ್ರಾಹಕ, ಬೆಂಗಳೂರಿನಲ್ಲಿ ಅನಾಲಿಟಿಕಾ ಸಂಸ್ಥೆ ಶಾಖೆ ಇದೆ: ವೈಲಿ

Pinterest LinkedIn Tumblr


ವಾಷಿಂಗ್ಟನ್‌: ಭಾರತದಲ್ಲಿ ಕಾಂಗ್ರೆಸ್‌ ಮಾತ್ರವಲ್ಲ ಇನ್ನೂ ಹಲವಾರು ರಾಜಕೀಯ ಪಕ್ಷಗಳು ನಮ್ಮ ಸಂಸ್ಥೆಯ ಗ್ರಾಹಕರು ಎಂದು ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯ ಮಾಹಿತಿ ವಿಶ್ಲೇಷಕ ಕ್ರಿಸ್ಟೋಫರ್‌ ವೈಲೀ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಕಾಂಗ್ರೆಸ್‌ ಮಾತ್ರವಲ್ಲ ಇನ್ನೂ ಹಲವಾರು ರಾಜಕೀಯ ಪಕ್ಷಗಳಿಗೆ ನಾವು ಕೆಲಸ ಮಾಡಿದ್ದೇವೆ. ಉತ್ತರ ಪ್ರದೇಶದಲ್ಲಿ ಜಾತಿ ಗಣತಿ ಕೂಡ ಮಾಡಿದ್ದೇವೆ. ಕೆಲವು ಭಾರತೀಯ ಪತ್ರಕರ್ತರ ಕೋರಿಕೆ ಮೇರೆಗೆ ಮಾಹಿತಿ ನೀಡುತ್ತಿದ್ದೇನೆ ಎಂದು ವೈಲಿ ತಿಳಿಸಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ಸಂದೇಶ ನೀಡಿರುವ ವೈಲಿ, ಜೆಡಿಯು ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.

ಫೇಸ್‌ಬುಕ್‌ ಮಾಹಿತಿ ಸೋರಿಕೆ ಸೇರಿದಂತೆ ಹಲವಾರು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿರುವ ವೈಲಿ, ಈಗ ಭಾರತದಲ್ಲಿ ಕಂಪನಿಯು ಹಲವಾರು ಶಾಖೆಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

2010ರ ಚುನಾವಣೆಯ ಕಾರ್ಯತಂತ್ರ ರೂಪಿಸಲಾಗಿದೆ. 2012ರಲ್ಲಿ ಉತ್ತರಪ್ರದೇಶದಲ್ಲಿ ಜಾತಿ ಗಣತಿ ಕೂಡ ಮಾಡಲಾಗಿದೆ ಎಂದರು.

ಕೇಂಬ್ರಿಡ್ಜ್‌ ಅನಾಲಿಟಿಕಾದ ಮೂಲ ಸಂಸ್ಥೆಯಾಗಿರುವ ಎಸ್‌ಸಿಎಲ್‌ ಸಂಸ್ಥೆ ಭಾರತದಲ್ಲಿ ಹಲವಾರು ಶಾಖೆ ಹೊಂದಿದೆ. ಘಾಜಿಯಾಬಾದ್‌ನಲ್ಲಿ ಮುಖ್ಯ ಕಚೇರಿ ಇದೆ. ಅಹಮದಾಬಾದ್‌, ಬೆಂಗಳೂರು, ಕಟಕ್‌, ಗುವಾಹಟಿ, ಹೈದರಾಬಾದ್‌, ಇಂದೋರ್‌, ಕೋಲ್ಕೊತಾ, ಪಟನಾ, ಪುಣೆಯಲ್ಲಿ ಶಾಖೆಗಳಿವೆ ಎಂದು ವೈಲಿ ಮಾಹಿತಿ ನೀಡಿದ್ದಾರೆ.

ತಮ್ಮ ಕಂಪನಿ ಬಳಿ ಏಳು ಲಕ್ಷ ಗ್ರಾಮಗಳ ಹಾಗೂ 600 ಜಿಲ್ಲೆಗಳ ಡೇಟಾಬೇಸ್‌ ಇದೆ ಎಂದು ವೈಲಿ ಸ್ಪಷ್ಟಪಡಿಸಿದ್ದಾರೆ.

Comments are closed.