ಕರ್ನಾಟಕ

ರಾಹುಲ್ ಒಂಥರಾ “ಪಾಪ ಪಾಂಡು” ಇದ್ದಂಗೆ; ವಿಶ್ವನಾಥ್ ಹೇಳಿದ್ದೇನು?

Pinterest LinkedIn Tumblr


ಮೈಸೂರು: ರಾಹುಲ್ ಗಾಂಧಿಯವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ರಾಹುಲ್ ಒಂಥರಾ ಪಾಪ ಪಾಂಡು ಇದ್ದಂಗೆ ಎಂದು ಮಾಜಿ ಸಂಸದ, ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರಿಗೆ ಮೆಚ್ಯುರಿಟಿ ಇಲ್ಲ. ಬರೆದುಕೊಟ್ಟ ಭಾಷಣವನ್ನು ಓದುತ್ತಾರೆ. ಸಂಸತ್ ಕಲಾಪದ ವೇಳೆ ಮೊಬೈಲ್ ನಲ್ಲಿ ಗೇಮ್ ಆಡ್ತಾರೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರನ್ನು ಸಂಭಾವ್ಯ ಪ್ರಧಾನಿ ಎಂದು ಹೇಳುತ್ತಾರೆ. ಆದರೆ ರಾಹುಲ್ ಗೆ 130 ಕೋಟಿ ಜನರನ್ನು ಆಳುವ ಅರ್ಹತೆ ಇಲ್ಲ. ಎನ್ ಸಿಸಿ, ಎನ್ ಎಸ್ ಎಸ್ ಅಂದರೆ ಏನು ಎಂಬ ಸಾಮಾನ್ಯ ಜ್ಞಾನವೂ ರಾಹುಲ್ ಗೆ ಇಲ್ಲ. ಇಂಥವರನ್ನು ರಾಷ್ಟ್ರನಾಯಕ ಎಂದು ಒಪ್ಪುವುದು ಹೇಗೆ? ಎಂದು ಪ್ರಶ್ನಿಸಿದರು.

-ಉದಯವಾಣಿ

Comments are closed.