ರಾಷ್ಟ್ರೀಯ

ಪಾನ್ ಕಾರ್ಡ್‌ಗೆ ಆಧಾರ್ ಜೋಡಣೆ ಅವಧಿ ವಿಸ್ತರಣೆ

Pinterest LinkedIn Tumblr


ದೆಹಲಿ : ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಪಾನ್ ಕಾರ್ಡ್‌ಗೆ ಆಧಾರ್ ಜೋಡಣೆ ಅವಧಿಯನ್ನು ಜೂ. 30ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಮಾ. 31 ರೊಳಗೆ ಪಾನ್ ಕಾರ್ಡ್‌ಗೆ ಆಧಾರ್ ಜೋಡಿಸಬೇಕು ಎಂದು ಹೇಳಿತ್ತು. ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಮಾ. 31ರೊಳಗೆ ಆಧಾರ್ ನಂಬರ್ ಜೋಡನೆ ಮಾಡಬೇಕು ಎಂಬ ಸರಕಾರದ ನಿಯಮವನ್ನು ಕಳೆದ ತಿಂಗಳು ಸುಪ್ರಿಂ ಕೋರ್ಟ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿ ಆದೇಶ ಹೊರಡಿಸಿತ್ತು.

ಹೊಸ ಪಾನ್‌ ಕಾರ್ಡ್ ಪಡೆಯುವುದಕ್ಕೆ ಹಾಗೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಆಧಾರ್ ಕಾರ್ಡ್ ಸಲ್ಲಿಸುವುದನ್ನು ಸರಕಾರ ಕಡ್ಡಾಯಗೊಳಿಸಿತ್ತು. ಆದಾಯ ತೆರಿಗೆ ನಿಯಮಾವಳಿ ಸೆಕ್ಷನ್ 139 ಎಎ(2) ಪ್ರಕಾರ, 2017 ಜುಲೈ 1 ರ ವೇಳೆ ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ಆಧಾರ್ ಕಾರ್ಡ್ ಜೋಡಣೆ ಮಾಡಬೇಕು.

ಮಾರ್ಚ್ 5 ರಂದು ಪ್ರಕಟಿಸಲಾದ ಮಾಹಿತಿ ಪ್ರಕಾರ ಒಟ್ಟು 33 ಕೋಟಿ ಪಾನ್‌ಕಾರ್ಡ್‌ಗಳಲ್ಲಿ, 16.5 ಕೋಟಿ ಪಾನ್‌ಕಾರ್ಡ್‌ಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ.

Comments are closed.