ಮನೋರಂಜನೆ

30 ಕೆಜಿ ತೂಕ ಕಳೆದುಕೊಂಡ ಧ್ರುವ ಸರ್ಜಾ

Pinterest LinkedIn Tumblr


ಧ್ರುವ ಸರ್ಜಾ ಭರ್ಜರಿ ಚಿತ್ರದ ಯಶಸ್ಸಿನ ನಂತರ ಪೊಗರು ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದರು. ನಂದ ಕಿಶೋರ್‌ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವ ಧ್ರುವ ದಿಢೀರ್‌ ಎಂದು ಮಾಯವಾಗಿದ್ದಾರೆ. ಯಾರ ಕಣ್ಣಿಗೂ ಬೀಳುತ್ತಿಲ್ಲ. ಪೊಗರು ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿದೆ.

ಯಾರ ಕಣ್ಣಿಗೂ ಬೀಳಬಾರದು ಎಂದು ನಿರ್ದೇಶಕ ನಂದ ಕಿಶೋರ್‌ ಹೇಳಿದ್ದಾರೆ. ಕಾರಣ ಏನೆಂದರೆ, ಧ್ರುವ ಸರ್ಜಾ ವರ್ಕೌಟ್‌ ಮಾಡುತ್ತಿದ್ದಾರೆ. ಪೊಗರು ಚಿತ್ರದಲ್ಲಿ ಶಾಲಾ ಬಾಲಕನಾಗಿಯೂ ಕಾಣಿಸಿಕೊಳ್ಳಬೇಕಿರುವುದರಿಂದ 13 ವರ್ಷದ ಹುಡುಗನಂತೆ ಕಾಣಲು ಕಸರತ್ತು ಮಾಡುತ್ತಿದ್ದಾರೆ. ಒಂದು ತಿಂಗಳಿನಿಂದ ಲಿಕ್ವಿಡ್‌ ಫುಡ್‌ನಲ್ಲಿರುವ ಧ್ರುವ ಈಗಾಗಲೇ 30 ಕೆ.ಜಿ ತೂಕ ಇಳಿಸಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ಶಾಲಾ ಹುಡುಗನಂತೆ ಕಾಣಿಸಿಕೊಳ್ಳಲಿರುವ ಧ್ರುವ ಸರ್ಜಾ ಲುಕ್‌ ರಿವೀಲ್‌ ಆದರೆ ಥ್ರಿಲ್‌ ಇರೋಲ್ಲ ಎಂದು ನಿರ್ದೇಶಕ ನಂದ ಕಿಶೋರ್‌ ಯಾರ ಕಣ್ಣಿಗೂ ಬೀಳಬಾರದು ಎಂದಿದ್ದಾರೆ. ಮತ್ತೆ ಧ್ರುವ ಕಾಣಿಸಿಕೊಂಡಾಗ ಯಾರು ಎಷ್ಟರ ಮಟ್ಟಿಗೆ ಗುರುತು ಹಿಡಿಯಬಲ್ಲರು ಎಂಬುದನ್ನು ಕಾದು ನೋಡಬೇಕಿದೆ.

Comments are closed.