ರಾಷ್ಟ್ರೀಯ

ಗೂಗಲ್ ಸ್ಟ್ರೀಟ್‌ಗೆ ಅನುಮತಿ ನಿರಾಕರಣೆ

Pinterest LinkedIn Tumblr


ದೆಹಲಿ: 360 ಡಿಗ್ರಿಯಲ್ಲಿ ನಗರ, ಪ್ರವಾಸಿ ತಾಣ, ಗುಡ್ಡಗಾಡು ಪ್ರದೇಶ ಹಾಗೂ ನದಿಗಳನ್ನು ಗುರುತಿಸುವ ಗೂಗಲ್ ಸ್ಟ್ರೀಟ್ ವೀವ್ ಅನುಮತಿ ಕೋರಿ ಗೂಗಲ್ ಸಲ್ಲಿಸಿದ್ದ ಅರ್ಜಿಯನ್ನು ಸರಕಾರ ತಿರಸ್ಕರಿಸಿದೆ.

ಸಾರ್ವಜನಿಕ ಸ್ಥಳಗಳನ್ನು ಕಾಲ್ಪನಿಕ ಚಿತ್ರಗಳ ಮೂಲಕ 360ಡಿಗ್ರಿ ಕೋನದಲ್ಲಿ ವೀಕ್ಷಿಸಲು ಸಾಧ್ಯವಾಗುವ ಗೂಗಲ್ ಸ್ಟ್ರೀಟ್ ವೀವ್‌ಗೆ ಅನುಮತಿ ಕೋರಿ ಗೂಗಲ್ 2015ರಲ್ಲಿ ಅರ್ಜಿ ಸಲ್ಲಿಸಿತ್ತು. ಆ ಸರಕಾರ ಅರ್ಜಿಯನ್ನು ಸರಕಾರ ತಿರಸ್ಕರಿಸಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾದ ಹಂಸ್‌ರಾಜ್ ಗಂಗಾರಾಮ್ ಅಹಿರ್ ತಿಳಿಸಿದ್ದಾರೆ.

ಭಾರತದ ಮುಖ್ಯ ನಗರಗಳು, ಪ್ರವಾಸಿ ತಾಣಗಳು, ನದಿ ಮುಂತಾದ ಹಲವು ಪ್ರಮುಖ ಸ್ಥಳಗಳನ್ನು ಕಾಲ್ಪನಿಕ ಚಿತ್ರಗ ಹಾಗೂ 3ಡಿ ಚಿತ್ರಗಳ ಮೂಲಕ ತೋರಿಸಲು ಗೂಗಲ್ ಉದ್ದೇಶಿಸಿತ್ತು. ಎಲ್ಲ ಚಿತ್ರಗಳನ್ನು ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡುವ ತಂತ್ರಜ್ಞಾನ ಇದಾಗಿದೆ. 2007ರಲ್ಲಿ ಗೂಗಲ್ ಪರಿಚಯಿಸಿದ ಈ ತಂತ್ರಜ್ಞಾನ ಈಗಾಗಲೇ ಅಮೆರಿಕ, ಕೆನಡಾ ಹಾಗೂ ಯೂರೋಪಿಯನ್ ದೇಶಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

Comments are closed.