ಕರ್ನಾಟಕ

ಯಾದಗಿರಿ: ಹಿಂದೂ ಶೋಭಾ ಯಾತ್ರೆಯಲ್ಲಿ ಚಾಕು ಝಳಪಿಸಿದ ಯುವಕ ಅರೆಸ್ಟ್‌

Pinterest LinkedIn Tumblr


ಯಾದಗಿರಿ: ನಗರದಲ್ಲಿ ಭಾನುವಾರ ನಡೆದಿದ್ದ ಹಿಂದೂ ಜಾಗರಣಾ ವೇದಿಕೆ ಹಮ್ಮಿಕೊಂಡಿದ್ದ ವಿರಾಟ್‌ ಹಿಂದೂ ಸಮಾವೇಶದ ಶೋಭಾಯಾತ್ರೆಯಲ್ಲಿ ಚಾಕು ಝಳಿಪಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಶಿವಕುಮಾರ್‌ ಸಕಲೂರ್‌ ಎನ್ನುವವನಾಗಿದ್ದು ಈತ ಶೋಭಾಯಾತ್ರೆ ತೆರಳುವ ವೇಳೆ ಕೈಯಲ್ಲಿ ಹರಿತವಾದ ಚಾಕು ಹಿಡಿದು ನರ್ತಿಸುತ್ತಿದ್ದ ದೃಶ್ಯವೂ ಕ್ಯಾಮರಾಗಳಲ್ಲಿ ಸೆರೆಯಾಗಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು ಮತ್ತು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಹರಿದಾಡಿತ್ತು.

ಯಾದಗಿರಿ ಪೊಲೀಸರು ಬಂಧಿತನ ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಹಿಂದೂ ಸಮಾವೇಶವನ್ನು ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಿ ಮಾತನಾಡಿದ್ದರು.

-ಉದಯವಾಣಿ

Comments are closed.