ರಾಷ್ಟ್ರೀಯ

ಲಾಕ್ ಆದ ಕಾರಿನಲ್ಲಿ ಉಸಿರುಗಟ್ಟಿ ಮಗು ಸಾವು

Pinterest LinkedIn Tumblr


ಜೈಪುರ್: ಹೊಶಂಗಾಬಾದ್‌ನಲ್ಲಿ ಶಾಲಾ ನಿರ್ದೇಶಕ ಮತ್ತು ಶಿಕ್ಷಕರ ಮರೆವಿನಿಂದಾಗಿ ನಾಲ್ಕು ಗಂಟೆಗೂ ಹೆಚ್ಚು ಕಾಲ ಲಾಕ್‌ ಆಗಿದ್ದ ಕಾರ್‌ನಲ್ಲೇ ಉಳಿದ 6 ವರ್ಷದ ಮಗು ಉಸಿರುಗಟ್ಟಿ ಮೃತಪಟ್ಟಿದೆ. ಮಗನ ಸಾವಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆಯಾಗಬೇಕೆಂದು ನೊಂದ ಪೋಷಕರು ಒತ್ತಾಯಿಸಿದ್ದಾರೆ.

ಖಾಸಗಿ ಶಾಲಾ ವಿದ್ಯಾರ್ಥಿ ನೈತಿಕ್ ಗೌರ ಮೃತ ದುರ್ದೈವಿ. ಕಾರಿನೊಳಗೆ ಉಸಿರುಗಟ್ಟಿ ತೀವ್ರ ಅಸ್ವಸ್ಥನಾಗಿದ್ದ ವಿದ್ಯಾರ್ಥಿಯನ್ನು ಭೋಪಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ನನ್ನ ಮಗ ನೈತಿಕ್ ಶಾಲೆಯ ನಿರ್ದೇಶಕರು ಹಾಗೂ ಶಿಕ್ಷಕರೊಂದಿಗೆ ಕಾರಿನಲ್ಲಿ ತೆರಳಿದ್ದ. ಆದರೆ ಶಾಲೆ ತಲುಪಿದ ನಂತರ ನೈತಿಕ ಕಾರಿನಿಂದ ಇಳಿಯಲು ನಿರಾಕರಿಸಿದ್ದ. ಈ ಸಂದರ್ಭದಲ್ಲಿ ನಿರ್ದೇಶಕರು ಹಾಗೂ ಶಿಕ್ಷಕರು ಆತನನ್ನು ಕಾರಿನಲ್ಲಿಯೇ ಬಿಟ್ಟು ಕಾರ್‌ ಲಾಕ್ ಮಾಡಿಕೊಂಡು ಹೋಗಿ ಬಳಿಕ ಮರೆತುಬಿಟ್ಟಿದ್ದಾರೆ. ಇವರೆಲ್ಲರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದ್ದಾಗಿ ಬಾಲಕನ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Comments are closed.