ಕರ್ನಾಟಕ

ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಎಸ್’ಐ ಬಂಧನ

Pinterest LinkedIn Tumblr

ಚಿಕ್ಕಮಗಳೂರು: ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸ್ ಎಎಸ್’ಐ ಓರ್ವರನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದಲ್ಲಿ ನಡೆದಿದೆ.

ಎನ್.ಆರ್.ಪುರ ಪೊಲೀಸ್ ಠಾಣೆಯ ಎಎಸ್ಐ ಕುಮಾರ ನಾಯ್ಕ ಬಂಧಿತರಾಗಿದ್ದು ಇವರು ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಹಾಗೂ ಅತ್ಯಾಚಾರಕ್ಕೆ ಯತ್ನಿಸಿದ್ದರು ಎನ್ನಲಾಗಿದೆ.

ಚುನಾವಣೆ ಸಂಬಂಧ ಕರ್ತವ್ಯಕ್ಕಾಗಿ ಗಸ್ತು ತಿರುಗಲು ಬಂದ ಬಗೆಗೆ ಸಹಿ ಪಡೆಯಲು ಹೋಗಿದ್ದ ಎಎಸ್’ಐ ಮನೆಯಲ್ಲಿ ಒಂಟಿಯಾಗಿದ್ದ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೋಲೀಸ್ ಎಸ್ಪಿ ಅಣ್ಣಾಮಲೈ ಮಾರ್ಗದರ್ಶನದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಆರೋಪಿ ಕುಮಾರ ನಾಯ್ಕ ಅವರನ್ನು ಸೇವೆಯಿಂದ ಅಮಾನತು ಗೊಳಿಸಿ ಬಂಧಿಸಿದ್ದಾರೆ.

Comments are closed.