ಕರ್ನಾಟಕ

ಬಡಪಾಯಿಯಿಂದ ಲಂಚ ಪಡೆದ ಪೊಲೀಸಪ್ಪನ ವೀಡಿಯೋ ವೈರಲ್

Pinterest LinkedIn Tumblr


ಬಾಗಲಕೋಟ: ಸಮವಸ್ತ್ರ ರಹಿತ ಪೆೊಲೀಸ್ ಪೇದೆಯೊಬ್ಬ ಟ್ಯ್ರಾಕ್ಟರ್ ಚಾಲಕನಿಂದ ಹಣ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ ಎನ್ನಲಾದ ಈ ಘಟನೆಯಲ್ಲಿ ಪೇದೆ ಹಣ ಪಡೆಯುತ್ತಿರುವ ವಿಡಿಯೋ ವಾಟ್ಸಪ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶೇರ್ ಆಗಿದೆ.

ನಗರದ ಪೊಲೀಸ್ ಪೇದೆ ಎನ್ನಲಾಗುತ್ತಿರುವ ವ್ಯಕ್ತಿ ಗದ್ದನಕೇರಿ ಕ್ರಾಸ್‍ನಲ್ಲಿ ಹಾಡಹಗಲೆ ಟ್ಯ್ರಾಕ್ಟರ್ ನಿಲ್ಲಿಸಿ ಸಾಹೇಬರು 1 ಸಾವಿರ ರೂ. ತಗೊಂಡು ಬಾ ಅಂದಿದ್ದಾರೆ. ಇಲ್ಲದಿದ್ದರೆ ಗಾಡಿ ಬಿಡುವುದಿಲ್ಲ. ನಿನ್ನೆ ಒಂದು ಟ್ಯ್ರಾಕ್ಟರ್ ಒಳಗೆ ಹಾಕಿದ್ದು, ಅದಕ್ಕೆ 2 ಸಾವಿರ ರೂ. ದಂಡ ಹಾಕಿದೆ. 1 ಸಾವಿರ ರೂ. ದಂಡ ಕಟ್ಟು ಇಲ್ಲದಿದ್ದರೆ ಠಾಣೆಗೆ ನಡೆ ಎಂದು ಅವಾಜ್ ಹಾಕಿದ್ದಾನೆ.

ಪೊಲೀಸ್ ಠಾಣೆಗೆ ಕರೆದೊಯ್ಯದರೆ ನಿಮ್ಮ ಮಾಲೀಕ ಬರುತ್ತಾನೆಯೇ ಎಂದು ಪೇದೆ ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಚಾಲಕ ‘ನಮ್ಮ ಮಾಲೀಕ ಕೋಲ್ಹಾಪುರದವರು. ಸದ್ಯ ನನ್ನ ಬಳಿ 300 ರೂಪಾಯಿ ಮಾತ್ರ ಇದೆ. 200 ರೂಪಾಯಿ ಕೊಡುತ್ತೇನೆ’ ಎಂದಿದ್ದಾನೆ. ಕೂಡಲೇ ಚಾಲಕನನ್ನು ಕೆಳಗಿಳಿಸಿ 200 ರೂಪಾಯಿ ಹಣ ಪಡೆದ ಪೊಲೀಸ್, ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.

‘ರೈತರ ಮೇಲೆ ಪೊಲೀಸರ ದೌರ್ಜನ್ಯ ಹೇಗಿದೆ ನೋಡಿ. ಮುಂದೆ ಯಾವುದೇ ಪೊಲೀಸ್ ಇಂತಹ ಕೃತ್ಯ ಮಾಡಬಾರದು. ಅಲ್ಲಿಯವರೆಗೂ ಈ ವೀಡಿಯೋ ಶೇರ್ ಮಾಡಿ’ ಎಂಬ ತಲೆಬರಹದೊಂದಿದೆ ಈ ವೀಡಿಯೋವನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ವೀಡಿಯೋದಲ್ಲಿರುವುದು ಪೊಲೀಸ್ ಪೇದೆಯೇ ಎಂಬುದು ಖಚಿತಗೊಂಡರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬಾಗಲಕೋಟ ಎಸ್‌ಪಿ ಸಿ.ಬಿ.ರಿಷ್ಯಂತ್ ಭರವಸೆ ನೀಡಿದ್ದಾರೆ.

Comments are closed.