ಕರ್ನಾಟಕ

ನಿಂದು ಯಡಿಯೂರಪ್ಪಂದು ಭಾರೀ ಲವ್‌ ಸ್ಟಾರ್ಟ್‌ ಆಗಿದೆ..!

Pinterest LinkedIn Tumblr


ಬೆಂಗಳೂರು: ಏನಯ್ಯಾ..ನಿಂದು ಯಡಿಯೂರಪ್ಪಂದು ಭಾರಿ ಲವ್‌ ಸ್ಟಾರ್ಟ್‌ ಆಗಿದೆ….’ಇದು ಸಚಿವ ಎಂ.ಬಿ.ಪಾಟೀಲ್‌ಗೆ ಸಿಎಂ ಸಿದ್ದರಾಮಯ್ಯ ಕಿಚಾಯಿಸಿದ ಪರಿ.

ರಾಜ್ಯ ಸಭಾ ಚುನಾವಣೆಗೆ ಮತ ಚಲಾಯಿಸಲು ವಿಧಾನಸೌಧಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರ ಸಮ್ಮುಖದಲ್ಲೇ ಸಿಎಂ ಈ ಹೇಳಿಕೆ ನೀಡಿದ್ದಾರೆ. ‘ನಿಂದು ಯಡಿಯೂರಪ್ಪಂದು ಭಾರಿ ಲವ್‌ ಸ್ಟಾರ್ಟ್‌ ಆಗಿದೆ.ಸಿಎಂ ಆಗಿದ್ದ ಅವನು ಅಷ್ಟು ಪೆದ್ದನಾ’ ಎಂದು ಪ್ರಶ್ನಿಸದರು. ಉತ್ತರ ನೀಡಿದ ಎಂ.ಬಿ.ಪಾಟೀಲ್‌ ‘ಪೆದ್ದ ಅಲ್ಲ ಸರ್‌ ಜೋಕರ್‌’ ಎಂದರು.

ಈ ವೇಳೆ ಪಕ್ಕದಲ್ಲಿದ್ದ ಕೂಡ್ಲಿಗಿ ಶಾಸಕ ನಾಗೇಂದ್ರ ಮಾಧ್ಯಮದವರು ಇದ್ದಾರೆ ಎಂದು ಎಚ್ಚರಿಸಿದರು. ಇದಕ್ಕೆ ಉತ್ತರವಾಗಿ ಸಿಎಂ ‘ಮಾಧ್ಯಮದವರು ನೋಡಲಿ ಅಂತಾನೆ ಹೇಳಿದ್ದು’ ಎಂದರು.

ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ನಕಲಿ ದೃಢೀಕರಣ ಪ್ರಮಾಣಪತ್ರ ಸಲ್ಲಿಸಿದ ಗುತ್ತಿಗೆ ಸಂಸ್ಥೆಗೆ 157.94 ಕೋಟಿ ರೂ. ಮೊತ್ತದ ಕಾಮಗಾರಿ ಗುತ್ತಿಗೆ ವಹಿಸುವ ಮೂಲಕ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ 25 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದರು. ಆರೋಪ ಸುಳ್ಳು ಎಂದು ಸಚಿವ ಪಾಟೀಲ್‌ ತಿರುಗೇಟು ನೀಡಿದ್ದರು.

-ಉದಯವಾಣಿ

Comments are closed.