ಮನೋರಂಜನೆ

ಮುಂಬಯಿ ಉದ್ಯಮಿಯಿಂದ ರೇಪ್‌ : ಬಾಲಿವುಡ್‌ ತಾರೆ ದೂರು

Pinterest LinkedIn Tumblr


ಮುಂಬಯಿ: ಬಾಲಿವುಡ್‌ನ‌ ಪ್ರಮುಖ ಮತ್ತು ಹಿರಿಯ ನಟಿಯೊಬ್ಬರು ಮುಂಬಯಿಯ ಉದ್ಯಮಿಯೋರ್ವ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಜುಹೂ ಪೊಲೀಸ್‌ ಠಾಣೆಗೆ ನೀಡಿರುವ ದೂರಿನ ಪ್ರಕಾರ ಪೊಲೀಸರು ಆರೋಪಿ ಉದ್ಯಮಿಯನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ. ಆರೋಪಿ ಉದ್ಯಮಿಯನ್ನು ರಿಮಾಂಡ್‌ಗೆ ಪಡೆಯಲು ಆತನನ್ನು ಕೋರ್ಟಿಗೆ ಹಾಜರುಪಡಿಸುವುದಾಗಿ ಅವರು ಹೇಳಿದ್ದಾರೆ.

ಆರೋಪಿ ಉದ್ಯಮಿಯು ಕಳೆದ ಒಂದು ತಿಂಗಳಿಂದ ನನ್ನ ಬೆನ್ನಿಗೆ ಬಿದ್ದು ಪೀಡಿಸುತ್ತಿದ್ದ ಮತ್ತು ತನಗೆ ಬೆದರಿಕೆ ಹಾಕುತ್ತಿದ್ದ; ನನಗೆ ವಾಟ್ಸಪ್‌ ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ; ನನ್ನ ಮನೆಯ ಸೆಕ್ಯುರಿಟಿ ಗಾರ್ಡ್‌ ಮೇಲೆ ಹಲ್ಲೆ ಮಾಡಿ ಆತ ನನ್ನ ಮನೆಯನ್ನೂ ಅಕ್ರಮವಾಗಿ ಪ್ರವೇಶಿಸಿದ್ದ ಎಂದು ಹಿರಿಯ ನಟಿ ದೂರಿದ್ದಾರೆ.

ಮುಂಬಯಿ ಪೊಲೀಸರು ಆರೋಪಿ ಉದ್ಯಮಿಯ ವಿರುದ್ಧ ಐಪಿಸಿ ಸೆ.376,420,465,467,468, 469,471 ಮತ್ತು 504ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದು ಬಾಲಿವುಡ್‌ ಅನ್ನು ಕಾಡಿರುವ ತಾಜಾ ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳದ ಕೇಸ್‌ ಆಗಿದೆ.

-ಉದಯವಾಣಿ

Comments are closed.