ಕರ್ನಾಟಕ

‘ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ CCTV switch off ಮಾಡಲಾಗಿತ್ತು’

Pinterest LinkedIn Tumblr


ಚೆನ್ನೈ: ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು 2016ರ ಡಿಸೆಂಬರ್‌ 5ರಂದು ನಿಧನ ಹೊಂದುವುದಕ್ಕೆ ಮೊದಲು 75 ದಿನಗಳ ಕಾಲ ಅಪೋಲೋ ಆಸ್ಪತ್ರೆಯ ಐಸಿಯು ನಲ್ಲಿದ್ದಾಗ ಅಲ್ಲಿನ ಎಲ್ಲ ಸಿಸಿಟಿವಿ ಕ್ಯಾಮೆರಾಗಳ ಸ್ವಿಚ್‌ ಆಫ್ ಮಾಡಲಾಗಿತ್ತು. 24 ಹಾಸಿಗೆಗಳ ಆ ಐಸಿಯು ಘಟಕದಲ್ಲಿ ಜಯಾ ಒಬ್ಬರೇ ರೋಗಿಯಾಗಿ ಇದ್ದರು ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರತಾಪ್‌ ಸಿ ರೆಡ್ಡಿ ಇಂದು ಗುರುವಾರ ಹೇಳಿದ್ದಾರೆ.

ಅಪೋಲೋ ಇಂಟರ್‌ನ್ಯಾಶನಲ್‌ ಕಲರೆಕ್ಟಾಲ್‌ ಸಿಂಪೋಸಿಯಂ 2018ರ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ರೆಡ್ಡಿ ಮಾತನಾಡುತ್ತಿದ್ದರು.

ಜಯಲಲಿತಾ ಅವರ ಸಾವಿನ ಕುರಿತಾಗಿ ತನಿಖೆ ನಡೆಸುತ್ತಿರುವ ಜಸ್ಟಿಸ್‌ ಎ ಆರ್ಮುಗಸ್ವಾಮಿ ಆಯೋಗಕ್ಕೆ ಜಯಲಲಿತಾ ಚಿಕಿತ್ಸೆ ಸಂಬಂಧಧ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದವರು ಹೇಳಿದರು.

ಜಯಲಲಿತಾ ದಾಖಲಾಗಿದ್ದ ಐಸಿಯು ಘಟಕದ ಸಿಸಿಟಿವಿ ಚಿತ್ರಿಕೆಗಳನ್ನು ನೀವು ಆಯೋಗಕ್ಕೆ ಸಲ್ಲಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರವಾಗಿ ಅವರು, “ಕ್ಷಮಿಸಿ, ಆಕೆ ಅಲ್ಲಿ ಇದ್ದ ಎಲ್ಲ 75 ದಿನಗಳ ಕಾಲ ಅಲ್ಲಿನ ಸಿಸಿಟಿವಿ ಸ್ವಿಚ್‌ ಆಫ್ ಆಗಿತ್ತು. ಆಕೆ ಐಸಿಯು ಸೇರಿದಾಕ್ಷಣವೇ ಅಲ್ಲಿನ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಐಸಿಯು ನ 24 ಕೋಣೆಗಳ ಪೈಕಿ ಒಂದನ್ನು ಮಾತ್ರವೇ ಉಪಯೋಗಿಸಲಾಗುತ್ತಿತ್ತು. ಐಸಿಯು ವಿಡಿಯೋ ಚಿತ್ರಿಕೆಯನ್ನು ಯಾರೂ ನೋಡುವುದು ಬೇಡವೆಂಬ ಕಾರಣಕ್ಕೆ ಅವರು ಕ್ಯಾಮೆರಾವನ್ನು ಕಿತ್ತು ಹಾಕಿದ್ದರು. ಆಕೆಯನ್ನು ಭೇಟಿ ಮಾಡುವುದಕ್ಕೆ ಯಾರನ್ನೂ ಬಿಡಲಾಗುತ್ತಿರಲಿಲ್ಲ ‘ ಎಂದು ರೆಡ್ಡಿ ಹೇಳಿದರು.

-ಉದಯವಾಣಿ

Comments are closed.