ಅಂತರಾಷ್ಟ್ರೀಯ

5.17 ಕೋಟಿಗೆ ಮಾರಾಟವಾದ ರವಿ ವರ್ಮಾ ಅವರ ತಿಲೋತ್ತಮೆ

Pinterest LinkedIn Tumblr


ನ್ಯೂಯಾರ್ಕ್‌: ಭಾರತದ ವಿಶ್ವ ಖ್ಯಾತಿಯ ಚಿತ್ರಕಾರ ರಾಜಾ ರವಿ ವರ್ಮಾ ವಿರಚಿತ ತೀಲೋತ್ತಮೆ ಕಲಾಕೃತಿಯು ದಕ್ಷಿಣ ಏಶ್ಯ ಆಧುನಿಕ ಮತ್ತು ಸಮಕಾಲೀನ ಕಲಾಕೃತಿಗಳ ನ್ಯೂಯಾರ್ಕ್‌ ಸೂತ್‌ಬಿಯಲ್ಲಿ 5.17 ಕೋಟಿ ರೂ.ಗಳಿಗೆ ಮಾರಾಟವಾಗಿದೆ.

ತಿಲೋತ್ತಮೆ ಕೃತಿಯ ಅಂದಾಜು ಮಾರಾಟ ಬೆಲೆಯನ್ನು 3.90 ಕೋಟಿ ರೂ.ಗೆ ನಿರ್ಧರಿಸಲಾಗಿತ್ತು. ಅದನ್ನು ಮೀರಿದ ಭಾರೀ ಮೊತ್ತಕ್ಕೆ ರವಿ ವರ್ಮಾ ಕಲಾಕೃತಿ ಮಾರಾಟವಾಗಿರುವುದು ಅವರ ಅತ್ಯಪೂರ್ವ ಕಲೆಗಾರಿಕೆಯ ಮಹತ್ವಕ್ಕೆ ಸಾಕ್ಷಿಯಾಗಿದೆ.

ರಾಜಾ ರವಿ ವರ್ಮಾ ಅವರನ್ನು 1979ರಲ್ಲಿ ಭಾರತ ಸರಕಾರ ರಾಷ್ಟ್ರದ ಅತ್ಯಮೂಲ್ಯ ಭಂಡಾರವೆಂದು ಘೋಷಿಸಿತ್ತು. ಅವರ ಹೆಚ್ಚಿನ ಕಲಾಕೃತಿಗಳು ವೇದ, ರಾಮಾಯಣ, ಮಹಾಭಾರತದ ಪಾತ್ರಗಳನ್ನು ಕುರಿತಾಗಿದ್ದು ಅವೆಲ್ಲವೂ ಆಳೆತ್ತರದ ಗಾತ್ರದಲ್ಲಿ ರಚಿತವಾಗಿವೆ.

-ಉದಯವಾಣಿ

Comments are closed.