ಮನೋರಂಜನೆ

ಕೆಲವು ಹೀರೋಯಿನ್‌ಗಳು ವೇಶ್ಯೆಯರಿಗಿಂತ ಕಡೆ: ನೇಹಾ

Pinterest LinkedIn Tumblr


ಸುಚಿ ಲೀಕ್ಸ್ ಹೆಸರಿನಲ್ಲಿ ಗಾಯಕಿ ಸುಚಿತ್ರಾ ಕಳೆದ ವರ್ಷ ಹೀರೋ, ಹೀರೋಯಿನ್‌ಗಳ ಹಾಟ್ ಚಿತ್ರಗಳನ್ನು, ಅವರ ಖಾಸಗಿ ವಿಷಯಗಳನ್ನು ಲೀಕ್ ಮಾಡುವ ಮೂಲಕ ತಲ್ಲಣ ಮೂಡಿಸಿದ್ದರು. ರೋಚಕ ವೀಡಿಯೋ, ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಕೆಲವು ಕಾಲಿವುಡ್ ತಾರೆಗಳ ನಿದ್ದೆಗೆ ಸಂಚಕಾರ ತಂದಿದ್ದರು. ಇದೀಗ ತಮಿಳು ನಿರ್ಮಾಪಕ ಕೆ.ಇ. ಜ್ಞಾನವೇಲ್ ರಾಜಾ ಅವರ ಪತ್ನಿ ನೇಹಾ ಹೀರೋಯಿನ್‌ಗಳ ಬಗ್ಗೆ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.

ಕೆಲವು ಹೀರೋಯಿನ್‌ಗಳು ವೇಶ್ಯೆಯರಿಂತ ಕಡೆಯಾಗಿದ್ದು, ಸಂಸಾರಗಳನ್ನು ಹಾಳುಗೆಡವುತ್ತಿದ್ದಾರೆ. ಮದುವೆಯಾದ ಪುರುಷರ ಪಾಲಿಗೆ ಕೆಲವು ಹೀರೋಯಿನ್‌ಗಳು ಮನೆ ಮುರುಕ ಕೆಲಸ ಮಾಡುತ್ತಿದ್ದಾರೆ. ಅಂತಹವರ ಪಟ್ಟಿಯನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದಿರುವುದು ಈಗ ಕಾಲಿವುಡ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

‘ಮೌನವಾಗಿ ಯಾಕಿರಬೇಕು, ಚಂಡಮಾರುತದಂತೆ ಸಮಸ್ಯೆಗಳ ಮೇಲೆ ತಿರುಗಿಬೀಳಬೇಕೆಂದು ನಾನು ಭಾವಿಸುತ್ತಿದ್ದೇನೆ. ಮಹಿಳೆಯರು ಮಹಿಳೆಯರಿಗೇ ಯಾಕೆ ಶತ್ರುಗಳಾಗಿ ಬದಲಾಗುತ್ತಿದ್ದಾರೆ. ಅಡ್ಡದಾರಿ ಆಯ್ಕೆ ಮಾಡಿಕೊಳ್ಳುತ್ತಾ, ಅದೆಷ್ಟೋ ಸಂಸಾರಗಳಲ್ಲಿ ಹುಳಿ ಹಿಂಡಿವುದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.

ಬಳಿಕ ತಾನು ಮಾಡಿರುವ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಪತ್ನಿಯನ್ನು ಹದ್ದುಬಸ್ತಿನಲ್ಲಿಡುವುದು ಪತಿಯ ಜವಾಬ್ದಾರಿ. ಅದೇ ರೀತಿ ಪತ್ನಿ ತಪ್ಪು ಮಾಡಿದರೆ ಪತ್ನಿ ಸಹ ಅದೇ ರೀತಿ ನಡೆದುಕೊಳ್ಳಬೇಕು. ಅಡ್ಡದಾರಿ ಹಿಡಿದ ಮಹಿಳೆಯರನ್ನು ಸಾರ್ವಜನಿಕವಾಗಿ ಹೊಡೆದರೂ ತಪ್ಪಿಲ್ಲ ಎಂದಿದ್ದಾರೆ.

ನೇಹಾ ಟ್ವೀಟ್
ಇತ್ತೀಚೆಗೆ ಮಾಡಿರುವ ಟ್ವೀಟ್‌ನಲ್ಲಿ ನೇಹಾ, ‘ನನಗೂ, ನನ್ನ ಪತಿಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸುತ್ತಲೂ ನಡೆಯುತ್ತಿರುವ ಕೆಲವು ಘಟನೆಗಳ ಬಗ್ಗೆ ನಾನು ಪ್ರತಿಕ್ರಿಯಿಸಿದೆ. ಪರ ಪುರುಷರ ಜೀವನದಲ್ಲಿ ಕೆಲವು ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ಅದರಿಂದ ಸಂಸಾರಗಳು ಹಾಳಾಗುತ್ತಿವೆ. ಪ್ರಚಾರಕ್ಕಾಗಿ ನಾನು ಈ ರೀತಿ ಟ್ವೀಟ್ ಮಾಡುತ್ತಿಲ್ಲ. ಮಾಧ್ಯಮವೊಂದನ್ನು ಆಯ್ಕೆ ಮಾಡಿಕೊಂಡು ಟ್ವೀಟ್ ಮಾಡುವ ಮೂಲಕ ಎಲ್ಲರ ಗಮನಕ್ಕೆ ತಂದಿದ್ದೇನೆ.’ ಎಂದಿದ್ದರು.
ನೇಹಾ ಟ್ವೀಟ್
‘ಕೆಲವರು ಲೀಕ್ಸ್ ಎನ್ನುತ್ತಿದ್ದಾರೆ. ಆದರೆ ಯಾರ ಗಮನವನ್ನೋ ಸೆಳೆಯಲು ನಾನು ಈ ಕೆಲಸ ಮಾಡುತ್ತಿಲ್ಲ. ಕೆಲವರು ವಿಷಯ ತಿಳಿದುಕೊಳ್ಳದೆ ನನ್ನ ಪತಿಯನ್ನು ಅಪಾರ್ಥ ಮಾಡಿಕೊಂಡು ಕಾಮೆಂಟ್ ಮಾಡಿದ್ದು ನೋವಿನ ಸಂಗತಿ. ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲವೇ ಅಲ್ಲ’ ಎಂದು ಪೋಸ್ಟ್ ಮಾಡಿದ್ದಾರೆ. ನೇಹಾ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಸಿಂಗಂ 3, ಗ್ಯಾಂಗ್ ಮುಂತಾದ ಚಿತ್ರಗಳನ್ನು ‘ಸ್ಟುಡಿಯೋ ಗ್ರೀನ್’ ನಿರ್ಮಾಣ ಸಂಸ್ಥೆ ಮೂಲಕ ಜ್ಞಾನವೇಲ್ ನಿರ್ಮಿಸಿದ್ದಾರೆ.

Comments are closed.