ಕ್ರೀಡೆ

ಮಮತಾ ಬ್ಯಾನರ್ಜಿ ಮುಂದೆ ಅಳಲು ತೋಡಿಕೊಳ್ಳಲಿದ್ದಾಳೆ ಶಮಿ ಪತ್ನಿ

Pinterest LinkedIn Tumblr


ನವದೆಹಲಿ: ಭಾರತ ತಂಡದ ವೇಗದ ಬೌಲರ್‌ ಮಹಮ್ಮದ್‌ ಶಮಿ ಪತ್ನಿ ಹಸಿನ್‌ ಜಹಾನ್‌ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಮಾ. 23ರಂದು ಅವರನ್ನು ಭೇಟಿ ಮಾಡಲಿದ್ದಾರೆ.

ಇದಕ್ಕೂ ಮುನ್ನ ಹಸಿನ್‌, ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದು, ತನ್ನ ಗಂಡನಿಂದಾದ ಅನ್ಯಾಯದ ಕಥೆಯನ್ನು ಕೇಳಿ ತಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು.

ಸತ್ಯಕ್ಕಾಗಿ ನಡೆಸುತ್ತಿರುವ ನನ್ನ ಹೋರಾಟದ ಮೇಲೆ ನೀವು ಕೇವಲ ಗಮನವಿಡಿ ಎಂದು ನಿಮ್ಮಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಒಮ್ಮೆ ನನಗೆ ಭೇಟಿಯಾಗಲು ಅವಕಾಶ ನೀಡಿ. ನನ್ನ ನೋವಿನ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿ ಮತ್ತು ನನಗೆ ಯಾವ ರೀತಿ ಸಹಾಯ ಮಾಡಬಹುದೆಂದು ನಂತರ ತೀರ್ಮಾನಿಸಿ ಎಂದು ಮಮತಾ ಬ್ಯಾನರ್ಜಿ ಅವರಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದರು.

ವೇಗಿ ಶಮಿಯಿಂದ ದೈಹಿಕ ಮತ್ತು ಮಾನಸಿಕವಾಗಿ ಹಲ್ಲೆಗೊಳಲಾಗಿದ್ದು, ಶಮಿಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪಿಸಿದ್ದ ಹಸಿನ್‌, ಆತನ ವಿರುದ್ಧ ದೂರನ್ನು ದಾಖಲಿಸಿದ್ದರು. ಈ ಸಂಬಂಧ ಶಮಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಐಪಿಸಿ ನಾನಾ ಕಲಮಿನಡಿ ಜಾಮೀನು ರಹಿತ ಹಾಗೂ ಜಾಮೀನ ಸಹಿತ ಪ್ರಕರಣಗಳನ್ನು ದಾಖಲಿಸಲಾಗಿದೆ.

Comments are closed.