ಕರ್ನಾಟಕ

JDS ಬಂಡಾಯ ಶಾಸಕರ ಅನರ್ಹತೆ ಪ್ರಕರಣ; ಹೈಕೋರ್ಟ್ ಹೇಳಿದ್ದೇನು?

Pinterest LinkedIn Tumblr


ಬೆಂಗಳೂರು: ಬಂಡಾಯ ಶಾಸಕರ ಅನರ್ಹತೆ ಕೋರಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರ ಏಪ್ರಿಲ್ 2ಕ್ಕೆ ಮುಂದೂಡಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ಬಂಡಾಯ ಶಾಸಕರು ತಾತ್ಕಾಲಿಕ ನಿರಾಳರಾದಂತಾಗಿದೆ.

ಸ್ಪೀಕರ್ ಗೆ ಹೈಕೋರ್ಟ್ ನಿರ್ದೇಶನ ನೀಡುವಂತಿಲ್ಲ ಎಂದು ಹೈಕೋರ್ಟ್ ಪುನರುಚ್ಚರಿಸಿದೆ. ಏತನ್ಮಧ್ಯೆ ಆಕ್ಷೇಪಣೆ ಸಲ್ಲಿಸಲು ಸ್ಪೀಕರ್ ವಕೀಲರಿಂದ ಸಮಯಾವಕಾಶ ಕೋರಿದ್ದರು. ಹೀಗಾಗಿ ಏಪ್ರಿಲ್ 2ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಬಂಡಾಯ ಶಾಸಕರು ನಾಳೆ ನಡೆಯಲಿರುವ ರಾಜ್ಯಸಭಾ ಮತದಾನದಲ್ಲಿ ಭಾಗವಹಿಸಬಹುದು ಎಂದು ಹೈಕೋರ್ಟ್ ನ್ಯಾ.ರಾಘವೇಂದ್ರ ಚೌಹಾಣ್ ಆದೇಶ ನೀಡಿದ್ದಾರೆ.

-ಉದಯವಾಣಿ

Comments are closed.