ಕರ್ನಾಟಕ

ನಲಪಾಡ್‌ಗೆ ಜಾಮೀನು ಕೊಡಬೇಡಿ; ರಾಜ್ಯ ಸರ್ಕಾರದಿಂದ ಕೇವಿಯಟ್‌

Pinterest LinkedIn Tumblr


ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಹ್ಯಾರಿಸ್‌ ಮತ್ತು ಆತನ ತಂಡಕ್ಕೆ ಜೈಲೇ ಗತಿಯಾಗಿದ್ದು, 1 ನೇ ಎಸಿಎಂಎಂ ನ್ಯಾಯಾಲಯ ಎಪ್ರಿಲ್‌ 4 ರ ವರೆಗೂ ನ್ಯಾಯಾಂಗ ಬಂಧನ ಮುಂದುವರಿಸಿದೆ. ಇನ್ನೊಂದೆಡೆ ನಲಪಾಡ್‌ಗೆ ಜಾಮೀನು ನೀಡದಂತೆ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಕೇವಿಯಟ್‌ ಸಲ್ಲಿಸಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಲಪಾಡ್‌ನ‌ನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯ ಕಲಾಪಕ್ಕೆ ಹಾಜರು ಪಡಿಸಲಾಗಿತ್ತು. ವಕೀಲ ವಾದ ಆಲಿಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನವನ್ನು ಮುಂದುವರಿಸಿದರು.

ಹಕೋರ್ಟ್‌ ಕೂಡ ಜಾಮೀನು ನಿರಾಕರಿಸಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಲಪಾಡ್‌ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನಲಪಾಡ್‌ಗೆ ಜಾಮೀನು ನೀಡಬಾರದು ಎಂದು ರಾಜ್ಯ ಸರ್ಕಾರದ ಪರ ವಕೀಲ ಸಂಜಯ್‌ ನೂಲಿ ಅವರು ಕೇವಿಯಟ್‌ ಅರ್ಜಿ ಸಲ್ಲಿಸಿದ್ದಾರೆ.

-ಉದಯವಾಣಿ

Comments are closed.