ಕರ್ನಾಟಕ

ಜೆಡಿಎಸ್ ಬೆನ್ನಿಗೆ ಚೂರಿ ಹಾಕಿ ಹೋದವರು ನೀವು; ಸಿದ್ದು ವಿರುದ್ಧ ಕುಮಾರಸ್ವಾಮಿ ಗುಡುಗು

Pinterest LinkedIn Tumblr


ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ವಿರುದ್ಧ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾದ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರ ಬೆನ್ನಿಗೆ ಚೂರಿ ಹಾಕಿದವರು ನೀವು ಎಂದು ಆರೋಪಿಸಿದರು.

ಕಾಂಗ್ರೆಸ್ ಮನೆ ಬಾಗಿಲ ಕಾಯ್ಕೊಂಡು 250 ಓಟಿನಿಂದ ಗೆದ್ದಿದ್ದೀರ, ಈಗ ಜೆಡಿಎಸ್ ವರಿಷ್ಠರ ಬಗ್ಗೆ ಏಕವಚನದಲ್ಲಿ ಮಾತನಾಡ್ತೀರ; ತಾಕ್ಕತ್ತಿದ್ರೆ ಪಕ್ಷೇತರವಾಗಿ ಚುನಾವಣೆಯಲ್ಲಿ ನಿಂತು ಗೆಲ್ಲಿ ಎಂದು ಸವಾಲು ಹಾಕಿದರು.

6 ಕೋಟಿ ಮತ ನಿಮ್ಮ ಜೇಬಲ್ಲಿ ಇದೆಯಾ ಸಿದ್ದರಾಮಯ್ಯನವರೆ? ನೂರು ಜನ ಸಿದ್ದರಾಮಯ್ಯ ಬಂದ್ರು ಜೆಡಿಎಸ್ ಪಕ್ಷ ತೆಗೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.

Comments are closed.