ಕರ್ನಾಟಕ

ಧರ್ಮ ಯುದ್ಧ; ದಿಢೀರ್ ಪತ್ರಿಕಾಗೋಷ್ಠಿ..ರಂಭಾಪುರಿ ಶ್ರೀ ಹೇಳಿದ್ದೇನು?

Pinterest LinkedIn Tumblr


ಹುಬ್ಬಳ್ಳಿ; ಪ್ರತ್ಯೇಕ ಲಿಂಗಾಯತ ಧರ್ಮ ರಚನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಜ್ಞರ ಸಮಿತಿ ರಚಿಸಿದ್ದೇ ಒಂದು ದೊಡ್ಡ ತಪ್ಪು. ನ್ಯಾ.ನಾಗಮೋಹನ್ ದಾಸ್ ಸಮಿತಿ ವೀರಶೈವ ಧರ್ಮವನ್ನು ಪರಿಶೀಲಿಸಿಲ್ಲ. ಸಿಎಂ ಈ ವರದಿಯನ್ನು ತಿರಸ್ಕರಿಸಬೇಕು ಎಂದು ರಂಭಾಪುರಿಶ್ರೀಗಳು ಆಗ್ರಹಿಸಿದ್ದಾರೆ.

ಸೋಮವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ವಿಚಾರದಲ್ಲಿ ರಚಿಸಿದ್ದ ಸಮಿತಿ ಇದ್ದವರು ಲಿಂಗಾಯತ ಧರ್ಮದ ಪರ ಇದ್ದವರು. ಇಂತಹವರಿಂದ ಹೇಗೆ ನ್ಯಾಯ ಸಿಗುತ್ತದೆ ಎಂದು ದೂರಿದರು.

ಸಿಎಂ ಕೆಲವೇ ಕೆಲವು ಮಠಾಧೀಶರ ಮಾತು ಕೇಳಬಾರದು. ಸಚಿವ ಸಂಪುಟ ಸಭೆ ತಜ್ಞರ ವರದಿ ಅಂಗೀಕರಿಸಬಾರದು. ಒಂದು ವೇಳೆ ಸಂಪುಟದ ಒಪ್ಪಿಗೆ ಪಡೆದು ಶಿಫಾರಸು ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಮಹದಾಯಿ, ಕಾವೇರಿ ವಿಚಾರದಲ್ಲಿಯೂ ಇಷ್ಟೊಂದು ತರಾತುರಿ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಯೋಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

-ಉದಯವಾಣಿ

Comments are closed.