ರಾಷ್ಟ್ರೀಯ

ಶ್ರೀದೇವಿ ಅವರದು ಸಹಜ ಸಾವಲ್ಲ: ಮುಲುಗು ಸಿದ್ಧಾಂತಿ

Pinterest LinkedIn Tumblr


ಆಂಧ್ರಪ್ರದೇಶದ ಶ್ರೀಕಾಳಹಸ್ತೀಶ್ವರಸ್ವಾಮಿ ದೇವಾಲಯದ ಅಸ್ಥಾನ ಸಿದ್ಧಾಂತಿಗಳಾದ ಮುಲುಗು ರಾಮಲಿಂಗೇಶ್ವರ ಸ್ವಾಮಿ ಯುಗಾದಿ ಪಂಚಾಂಗ ಶ್ರವಣದಲ್ಲಿ ಕೆಲವೊಂದು ಮಹತ್ವದ ಅಂಶಗಳನ್ನು ತಿಳಿಸಿದ್ದಾರೆ. ಖ್ಯಾತ ತಾರೆ ಶ್ರೀದೇವಿ ಅವರದು ಹತ್ಯೆಯಾಗಿದ್ದು, ಆತ್ಮೀಯರೇ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಭಾನುವಾರ ಹಮ್ಮಿಕೊಂಡಿದ್ದ ಪಂಚಾಂಗ ಶ್ರವಣದಲ್ಲಿ ಅವರು ಹೇಳಿದ್ದಾರೆ.

ನಟಿ ಶ್ರೀದೇವಿ ಅವರದು ಸಹಜ ಸಾವಲ್ಲ, ಅವರ ಆತ್ಮೀಯರೇ ಹತ್ಯೆ ಮಾಡಿದ್ದಾರೆ ಎಂದು ಟೈಮ್ಸ್ ಬಳಗದ ‘ಸಮಯಂ ತೆಲುಗು’ ಫೇಸ್‌ಬುಕ್ ಲೈವ್‌ನಲ್ಲಿ ತಿಳಿಸಿದ್ದ ಅವರು, ಯುಗಾದಿ ದಿನ ಪಂಚಾಂಗ ಶ್ರವಣದಲ್ಲೂ ಇದೇ ಮಾತನ್ನು ಒತ್ತಿ ಹೇಳಿರುವುದು ವಿಶೇಷ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಹುಮತ ಸಿಗಲ್ಲ. ಥರ್ಡ್ ಫ್ರಂಟ್ ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ. 2019ರ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಟಿಆರ್‌ಎಸ್ ಅಧಿಕಾರಕ್ಕೆ ಬರಲಿದ್ದು, ತೆಲುಗು ರಾಜ್ಯಗಳಲ್ಲಿ ಬಿಜೆಪಿಗೆ ಒಂದೇ ಒಂದು ಲೋಕಸಭೆ ಸೀಟು ಸಹ ಸಿಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Comments are closed.