ಮುಂಬೈ

ಅಕ್ಷಯ್ ಕುಮಾರ್ ಭಾರತೀಯ ಅಲ್ಲ: ರಾಜ್ ಠಾಕ್ರೆ

Pinterest LinkedIn Tumblr


ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಕೊಟ್ಟಿರುವ ಹೇಳಿಕೆಗಳು ಬಾಲಿವುಡ್ ವಲಯದಲ್ಲೂ ಸಂಚಲನ ಮೂಡಿಸಿವೆ. ನೀರವ್ ಮೋದಿ ಹಗರಣದಿಂದ ಜನರ ದೃಷ್ಟಿಯನ್ನು ಬೇರೆಡೆಗೆ ಹರಿಸಲು ಶ್ರೀದೇವಿ ಅಂತ್ಯಕ್ರಿಯೆಗೆ ಬಹಳಷ್ಟು ಪ್ರಾಮುಖ್ಯತೆ ನೀಡಿದರು ಎಂದು ಆರೋಪಿಸಿದ್ದಾರೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಠಾಕ್ರೆ ವಾಗ್ದಾಳಿ ಮಾಡಿದ್ದಾರೆ.

ಭಾನುವಾರ ಮುಂಬೈನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡುತ್ತಾ, ಮೋದಿ ಮುಕ್ತ ಭಾರತಕ್ಕಾಗಿ ಅವರು ಕರೆ ನೀಡಿದ್ದಾರೆ. ಹಿಟ್ಲರ್ ರೀತಿಯಲ್ಲಿ ಬಿಜೆಪಿ ಸರಕಾರದ ಆಡಳಿತ ನಡೆಯುತ್ತಿದೆ ಎಂದು ಹರಿಹಾಯ್ದಿದ್ದಾರೆ.

‘ಶ್ರೀದೇವಿ ದೊಡ್ಡ ತಾರೆ ಇರಬಹುದು ಆದರೆ ಅವರು ದೇಶಕ್ಕಾಗಿ ಏನು ಮಾಡಿದ್ದಾರೆ? ಅವರ ಪಾರ್ಥಿವ ಶರೀರದ ಮೇಲೆ ತ್ರಿವರ್ಣಧ್ವಜ ಯಾಕೆ ಇಟ್ಟರು? ಸರಕಾರಿ ಗೌರವಗಳೊಂದಿಗೆ ಯಾಕೆ ಅವರ ಅಂತ್ಯಕ್ರಿಯೆ ನೆರವೇರಿಸಿದರು? ಒಂದು ವೇಳೆ ಬಿಜೆಪಿಯೇತರ ಮುಖ್ಯಮಂತ್ರಿ ಈ ರೀತಿ ಮಾಡಿದ್ದರೆ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿದ್ದವು. ಮೋದಿ ಸರಕಾರಕ್ಕೆ ಭಯಬಿದ್ದು ಮಾಧ್ಯಮಗಳು ಬಾಯಿಬಿಡುತ್ತಿಲ್ಲ’ ಎಂದು ಠಾಕ್ರೆ ಕಿಡಿ ಕಾರಿದ್ದಾರೆ.

ಬಾಲಿವುಡ್ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಮೇಲೂ ಅವರು ಆರೋಪಗಳ ಸುರಿಮಳೆ ಮಾಡಿದ್ದಾರೆ. ‘ಅಕ್ಷಯ್ ಕುಮಾರ್ ಭಾರತೀಯ ಅಲ್ಲ. ಅವರ ಪಾಸ್‌ಪೋರ್ಟ್‌ನಲ್ಲಿ ಕೆನಡಿಯನ್ ಎಂದಿದೆ. ವಿಕಿಪೀಡಿಯಾ ಸಹ ಅವರು ಭಾರತದಲ್ಲಿ ಹುಟ್ಟಿದ ಕೆನಡಿಯನ್ ಎಂದಿದೆ. ಒಂದು ಕಾಲದ ನಟ ಮನೋಜ್ ಕುಮಾರ್ ಹಾದಿಯಲ್ಲಿ ಅಕ್ಷಯ್ ನಡೆಯಲು ಹೆಜ್ಜೆಹಾಕುತ್ತಿದ್ದಾರೆಂದು’ ಟೀಕಿಸಿದ್ದಾರೆ.

Comments are closed.