ಕರ್ನಾಟಕ

ಹುಷಾರ್… ವಾಟ್ಸಪ್ ಮೇಲೆ ಚೀನಿ ಹ್ಯಾಕರ್ ಗಳ ಕಣ್ಣು: ಭಾರತೀಯ ಸೇನೆ

Pinterest LinkedIn Tumblr


ಬೆಂಗಳೂರು: ಒಂದಲ್ಲಾ ಒಂದು ವಿಚಾರದಲ್ಲಿ ಮೂಗು ತೂರಿಸುತ್ತಿರುವ ಚೀನಾ ಇದೀಗ ಭಾರತೀಯ ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಕದಿಯಲು ಮುಂದಾಗಿದೆ ಎಂದು ಆರೋಪಿಸಿ ಭಾರತೀಯ ಸೇನೆ ವಿಡಿಯೋವನ್ನು ಭಾನುವಾರ ಬಿಡುಗಡೆ ಮಾಡಿದೆ!

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಬಳಸುವ ಗ್ರಾಹಕರು ತುಂಬಾ ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದೆ. ಚೀನಾ ಜೊತೆಗಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನಿಯೋಜಿತರಾಗಿರುವ ಯೋಧರು ವಾಟ್ಸಪ್ ಸೇರಿದಂತೆ ಕೆಲವು ಅಪ್ಲಿಕೇಶನ್ ಗಳನ್ನು ಬಳಸದಂತೆ ಸೇನೆ ನಾಲ್ಕು ತಿಂಗಳ ಹಿಂದೆ ಎಚ್ಚರಿಸಿತ್ತು.

ಭಾರತೀಯ ಸೇನೆಯ ಅಧಿಕೃತ ಟ್ವೀಟರ್ ಹ್ಯಾಂಡಲ್ ನಲ್ಲಿ ಎಡಿಜಿಪಿಐ, ಚೀನಾ ಹ್ಯಾಕರ್ಸ್ಸ್ ಗಳು ನಮ್ಮ ಡಿಜಿಟಲ್ ಜಗತ್ತಿನಲ್ಲಿ ದೃಷ್ಟಿ ನೆಟ್ಟಿದ್ದಾರೆ ಎಚ್ಚರ ಎಂಬುದಾಗಿ ತಿಳಿಸಿದ್ದರು.

ನಿಮ್ಮ(ಭಾರತೀಯ) ಎಲ್ಲಾ ರೀತಿಯ ಡಿಜಿಟಲ್ ಜಗತ್ತಿನೊಳಗಿನ ಮಾಹಿತಿ ಕದಿಯಲು ಚೀನಿ ಹ್ಯಾಕರ್ಸ್ಸ್ ಗಳು ಸಿದ್ದವಾಗಿದ್ದಾರೆ. ಅದರಲ್ಲೂ ವಾಟ್ಸಪ್ ಗುಂಪುಗಳ ಮೇಲೆ ಹ್ಯಾಕ್ ಮಾಡುವ ಹೊಸ ದಾರಿಯನ್ನು ಕಂಡುಕೊಂಡಿದ್ದಾರೆ. ಚೀನಿ ಸಂಖ್ಯೆಗಳು +86ನಿಂದ ಆರಂಭಗೊಳ್ಳುತ್ತಿದ್ದು, ನಿಮ್ಮ ಗುಂಪಿನೊಳಗೆ ಬಂದು ಮಾಹಿತಿ ಕದಿಯುವ ಸಂಚು ಹೂಡಿದ್ದಾರೆ ಎಂದು ವಿಡಿಯೋ ಮೂಲಕ ಎಡಿಜಿಪಿಐ ಟ್ವೀಟ್ ಮಾಡಿದ್ದರು.

-ಉದಯವಾಣಿ

Comments are closed.