ರಾಷ್ಟ್ರೀಯ

ರೋಹಿಂಗ್ಯಾ ಕ್ಯಾಂಪ್‌ಗಳ ಪರಿಸ್ಥಿತಿ ಕುರಿತು ಕೇಂದ್ರದ ವರದಿ ಕೇಳಿದ ಸುಪ್ರಿಂ

Pinterest LinkedIn Tumblr


ದೆಹಲಿ: ವಿವಿಧ ರಾಜ್ಯಗಳಲ್ಲಿ ನಿರಾಶ್ರಿತರ ಕ್ಯಾಂಪ್‌ಗಳಲ್ಲಿ ವಾಸಿಸುತ್ತಿರವ ರೋಹಿಂಗ್ಯಾ ವಲಸಿಗರ ಪರಿಸ್ಥಿತಿ ಕುರಿತು ವರದಿ ನೀಡಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ರೋಹಿಂಗ್ಯಾಗಳ ಕ್ಯಾಂಪ್‌ಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹಿರಿಯ ವಕೀಲ ಕಾಲಿನ್‌ ಗೊನ್ಸಾಲ್ವೆಸ್‌ ಕಳಕಳಿ ವ್ಯಕ್ತಪಡಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಎ ಎಂ ಖಾನ್ವಿಲ್ಕರ್‌ ಹಾಗು ಡಿ ವೈ ಚಂದ್ರಚೂಡ್‌ ಇದ್ದ ಪೀಠ ಈ ನಡೆಗೆ ಬಂದಿದೆ.

ಅರ್ಜಿದಾರ ಝಾಫರ್‌ ಉಲ್ಲಾ ಪರ ವಾದ ಮಂಡಿಸಿದ ಹಿರಿಯ ವಕೀಲ ಹರಿಯಾಣಾ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಇರುವ ರೋಹಿಂಗ್ಯಾಗಳ ಕ್ಯಾಂಪ್‌ಗಳಲ್ಲಿ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ. ಕಳಪೆ ಹಾಗು ಅನಾರೋಗ್ಯಕರ ಪರಿಸ್ಥಿತಿಗಳ ಪರಣಾಮ ಈ ಕ್ಯಾಂಪ್‌ಗಳಲ್ಲಿ ಸಾವುಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ವಕೀಲರು ಇದೇ ವೇಳೆ ವಾದಿಸಿದ್ದಾರೆ.

ಮ್ಯಾನ್ಮಾರ್‌ನ ರಾಖೈನ್‌ ಪ್ರಾಂತ್ಯದಲ್ಲಿ ದಾಂಧಲೆ ನಡೆಸಿ ಅಲ್ಲಿಂದ ಪರಾರಿಯಾಗಿರುವ ರೋಹಿಂಗ್ಯಾ ದಂಗೆಕೋರರು ಸದ್ಯ ಹೈದರಾಬಾದ್‌, ಜಮ್ಮು, ಹರಿಯಾಣಾ, ಉತ್ತರ ಪ್ರದೇಶ, ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶ ಹಾಗು ರಾಜಸ್ಥಾನದಲ್ಲಿ ವಾಸವಾಗಿದ್ದಾರೆ.

Comments are closed.