ಅಂತರಾಷ್ಟ್ರೀಯ

ರಷ್ಯಾ ಅಧ್ಯಕ್ಷರಾಗಿ ಪುಟಿನ್ ನಾಲ್ಕನೇ ಬಾರಿ ಆಯ್ಕೆ

Pinterest LinkedIn Tumblr


ಮಾಸ್ಕೋ: ಪಾಶ್ಚಾತ್ಯ ಜಗತ್ತಿನೊಂದಿಗೆ ರಷ್ಯಾದ ನಂಟು ದಿನೇ ದಿನೇ ಹಳಸು ತ್ತಿರುವ ನಡುವೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ವ್ಲಾದಿಮೀರ್‌ ಪುಟಿನ್ ಇನ್ನೂ ಆರು ವರ್ಷಗಳ ಮಟ್ಟಿಗೆ ಮರು ಆಯ್ಕೆಯಾಗಿದ್ದಾರೆ.

ಎರಡು ದಶಕಗಳಿಂದಲೂ ಅಧ್ಯಕ್ಷರಾಗಿರುವ ಪುಟಿನ್‌ ಚುನಾವಣೆಯಲ್ಲಿ ಶೇ 76 ರಷ್ಟು ಮತಗಳನ್ನು ಬಾಚಿಕೊಂಡಿದ್ದಾರೆ. ಇದೇ ವೇಳೆ ಮತದಾನದ ವೆಳೆ ಅಕ್ರಮ ಎಸಗಲಾಗಿದೆ ಎಂದು ಪುಟಿನ್ ವಿರೋಧಿಗಳು ಆಪಾದಿಸಿದ್ದಾರೆ.

ಈ ಗೆಲುವಿನ ಮೂಲಕ ಪುಟಿನ್‌ ಐತಿಹಾಸಿಕ ನಾಲ್ಕನೇ ಬಾರಿಗೆ ಅಧ್ಯಕ್ಷ ಗಾದಿಗೆ ಏರಿದ್ದಾರೆ. ಪುಟಿನ್‌ ಎದುರು ಏಳು ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಪುಟಿನ್‌ರ ಕಟ್ಟಾ ರಾಜಕೀಯ ವಿರೋಧಿ ಅಲೆಕ್ಸೈ ನವಾಲ್ನಿ ಕಾನೂನಾತ್ಮಕ ಕಾರಣ ಗಳಿಂದ ಚುನಾವಣೆಯಲ್ಲಿ ಸ್ಫರ್ಧಿಸಲು ಆಗಲಿಲ್ಲ.

ಸ್ಟಾಲಿನ್‌ ಬಳಿಕ ಅತ್ಯಂತ ಸುದೀರ್ಘಾವಧಿಗೆ ಆಯ್ಕೆಯಾದ ನಾಯಕರಾದ ಪುಟಿನ್‌ ತಮ್ಮ ಗೆಲುವಿನ ಬಳಿಕ ಮಾತನಾಡಿ “ಈ ಗೆಲುವಿನ ಮೂಲಕ ನಮ್ಮ ಜನರಲ್ಲಿ ವಿಶ್ವಾಸ ಹಾಗು ಭರವಸೆಯನ್ನು ಕಾಣುತ್ತಿದ್ದೇನೆ” ಎಂದು ಜನರನ್ನುದ್ದೇಶಿದಿ ಪುಟಿನ್ ತಿಳಿಸಿ ದ್ದಾರೆ.

ಚುನಾವಣೆಯಲ್ಲಿ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆ ಉತ್ತೇಜಿಸುವ ಸಲುವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದಲ್ಲಿ ಕಠಿಣ ಕ್ರಮದ ಭೀತಿಯನ್ನೂ ಹುಟ್ಟಿಸ ಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಶೇ 76.4 ರಷ್ಟು ಮತಗಳನ್ನು ಬಾಚಿರುವ ಪುಟಿನ್‌ರ ಸಮಿಪದ ಪ್ರತಿಸ್ಫರ್ಧಿ ಎಂದರೆ ಕಮ್ಯೂನಿಸ್ಟ್‌ ಪಕ್ಷದ ಪವೆಲ್‌ ಗ್ರುನ್‌ ಡಿನಿನ್‌(ಶೇ 12 ಮತ). ಮುಂಬರುವ ಬೇಸಿಗೆಯಲ್ಲಿ ಫೀಫಾ ವಿಶ್ವಕಪ್‌ ಆಯೋಜಿಸಲಿರುವ ರಷ್ಯಾ ಸದ್ಯ ಅಮೆರಿಕದ ಕೆಲ ನಿರ್ಬಂಧ ಗಳನ್ನು ಎದುರಿಸುತ್ತಿದೆ. ಪೂರ್ವ ಉಕ್ರೇನ್‌ನ ಭಾಗವಾಗಿದ್ದ ಕ್ರಿಮಿಯಾವನ್ನು ರಷ್ಯ ತನ್ನ ತೆಕ್ಕೆಗೆ ಪಡೆದು ನಾಲ್ಕು ವರ್ಷಗಳಾದ ಹಿನ್ನೆಲೆಯಲ್ಲಿ ಇದೇ ವಿಚಾರವಾಗಿ ಪುಟಿನ್‌ ಪರ ಸಾಕಷ್ಟು ಬೆಂಬಲವೂ ಇದೆ.

Comments are closed.