ಸಾಗರ: ಭಾರತವನ್ನು ಪ್ರೀತಿಸುವ, ದೇಶದ ಅಭಿವೃದ್ಧಿಗೆ ಹೆಗಲು ಕೊಡುವ ಎಲ್ಲ ಜನಾಂಗದ ರಾಷ್ಟ್ರ ಭಕ್ತರ ಮತ ಪಡೆದು ಬಿಜೆಪಿ ಈ ಬಾರಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ಹೇಳಿದರು.
ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿ, ಓಲೈಸಿ ರಾಜಕಾರಣ ಮಾಡುವ ಅನಿವಾರ್ಯತೆ ಬಿಜೆಪಿಗೆ ಇಲ್ಲ. ದೇಶದ್ರೋಹಿಗಳು ಹಾಗೂ ಭಯೋತ್ಪಾದಕ ಮುಸ್ಲಿಂ ಮತಗಳು ಬಿಜೆಪಿಗೆ ಬೇಡ. ಹಿಂದುತ್ವ ಬಿಜೆಪಿಯ ಉಸಿರಾಗಿದೆ. 24ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಿಂದೂ ಕಾರ್ಯಕರ್ತರ ಕೊಲೆಯನ್ನು ಹಗುರವಾಗಿ ವಿಶ್ಲೇಷಿಸಿದ್ದಾರೆ. ಇಂತಹ ಘಟನೆಗಳನ್ನು ಸರಕಾರ ವಿರೋಧಿಸಿಲ್ಲ. ಇಂತಹ ಸರಕಾರ ನಮಗೆ ಬೇಕಾ ಎಂಬುದನ್ನು ಮತದಾರರು ಯೋಚಿಸಬೇಕಾಗಿದೆ ಎಂದರು.
ಸಂಸದ ವೀರಪ್ಪ ಮೊಯ್ಲಿ ಈ ಸರಕಾರ ಉಳ್ಳವರ ಸರಕಾರ ಅಂತ ಸರ್ಟಿಫಿಕೇಟ್ ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಯೋಗ್ಯತೆ ಇಲ್ಲ. ಕಾರ್ಯಕರ್ತರು ಕಾಂಗ್ರೆಸ್ ಸರಕಾರ ವೈಫಲ್ಯವನ್ನು ಜನರಿಗೆ ತಿಳಿಸಿ, ಬಿಜೆಪಿಯನ್ನು ಶ್ರಮಿಸಬೇಕು ಎಂದು ಹೇಳಿದರು.
Comments are closed.