ಕರ್ನಾಟಕ

ಬಿಜೆಪಿಯತ್ತ ಲಿಂಗಾಯತ ಮಠಗಳ ಚಿತ್ತ

Pinterest LinkedIn Tumblr


ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಬೇಡಿಕೆ ಸಂಬಂಧ ಕೈಗೊಂಡಿರುವ ನಿರ್ಧಾರಗಳು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಧರ್ಮಸಂಕಟಕ್ಕೆ ಸಿಲುಕಿಸಿವೆ.

ಒಂದು ಕಡೆ ಪ್ರತ್ಯೇಕ ಲಿಂಗಾಯತ ಲಿಂಗಾಯತ ಧರ್ಮ ಸ್ಥಾಪನೆಯ ಬೇಡಿಕೆ ನಡುವೆಯೂ ಸಮುದಾಯದ ಬಹುತೇಕ ಮಠಗಳು ಬಿಜೆಪಿಗೆ ನಿಷ್ಠೆ ತೋರುವ ಮನಸ್ಥಿತಿಯಲ್ಲಿವೆ. ಇನ್ನೊಂದು ಕಡೆ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಿದರೂ ಕಾಂಗ್ರೆಸ್‌ಗೆ ಹೆಚ್ಚಿನ ರಾಜಕೀಯ ಲಾಭವಾಗುವುದಿಲ್ಲ ಎಂಬ ಮಾಹಿತಿ ಸರಕಾರಕ್ಕೆ ಸಿಕ್ಕಿದೆ. ಹೀಗಾಗಿ ‘ಧರ್ಮ ರಾಜಕಾರಣ’ ನಡೆಸಿ ಕೈಸುಟ್ಟುಕೊಳ್ಳುವಂತಾದರೆ ಎಂಬ ಆತಂಕ ಸರಕಾರವನ್ನು ಕಾಡುತ್ತಿದೆ. ಈ ಬೆಳವಣಿಗೆಗಳಿಂದ ವಿಚಲಿತರಾದ ಸಿಎಂ ಬುಧವಾರ ನಿಗದಿಯಾಗಿದ್ದ ಸಂಪುಟ ಸಭೆಯನ್ನು ಮುಂದೂಡುವ ನಿಲುವಿಗೆ ಬಂದರು ಎಂದು ಗೊತ್ತಾಗಿದೆ.

Comments are closed.