ಕರ್ನಾಟಕ

ಈಗ ಅವರ ಕ್ಷೇತ್ರದಲ್ಲೇ ಹಳಸಿದೆ, ಕೌಂಟ್ ಡೌನ್ ಶುರು; ಯೋಗಿಗೆ ಸಿಎಂ

Pinterest LinkedIn Tumblr


ಚಿತ್ರದುರ್ಗ: ಉತ್ತರಪ್ರದೇಶ ಮತ್ತು ಬಿಹಾರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪರಾಜಯಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೌಂಟ್ ಡೌನ್ ಶುರುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ಹೊಸದುರ್ಗದಲ್ಲಿ ರಾಜ್ಯ ಸರಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತ ಹೇಳುತ್ತಾರೆ. ಆದರೆ ಕ್ರಿಶ್ಚಿಯನ್, ಮುಸ್ಲಿಮರನ್ನು ಕಡೆಗಣಿಸುತ್ತಾರೆ ಎಂದು ದೂರಿದರು.

ಉತ್ತರಪ್ರದೇಶದಲ್ಲಿ ಹಿಂದುತ್ವದ ಮೋಡಿ ನಡೆಯಲಿಲ್ಲ ಎಂಬುದಕ್ಕೆ ಲೋಕಸಭಾ ಉಪಚುನಾವಣೆಯ ಫಲಿತಾಂಶವೇ ಸಾಕ್ಷಿಯಾಗಿದೆ. ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಬಂದು ಭಾಷಣ ಮಾಡಿ ಹೋಗುತ್ತಾರೆ. ಈಗ ಅವರ ಕ್ಷೇತ್ರದಲ್ಲೇ ಹಳಸಿದೆ. ಸಿಎಂ ಯೋಗಿ ಮತ್ತು ಉಪಮುಖ್ಯಮಂತ್ರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲನ್ನನುಭವಿಸಿದೆ ಎಂದು ವಾಗ್ದಾಳಿ ನಡೆಸಿದರು. ಅಲ್ಲಿ ಸಲ್ಲದವರು ಇಲ್ಲಿಯೂ ಸಲ್ಲರಯ್ಯ, ಇಲ್ಲಿ ಸಲ್ಲುವವರು, ಅಲ್ಲಿಯೂ ಸಲ್ಲುವವರಯ್ಯ ಎಂದು ಮಾರ್ಮಿಕವಾಗಿ ಹೇಳಿದರು.

-ಉದಯವಾಣಿ

Comments are closed.