ರಾಷ್ಟ್ರೀಯ

ಸರಕಾರೀ ಸೇವೆಗೆ ಮಿಲಿಟರಿ ಸೇವೆ ಕಡ್ಡಾಯಗೊಳಿಸಲು ಕೇಂದ್ರಕ್ಕೆ ಸಲಹೆ

Pinterest LinkedIn Tumblr


ದೆಹಲಿ: ರಾಜ್ಯ ಅಥವಾ ಕೇಂದ್ರ ಸರಕಾರೀ ಹುದ್ದಗೆ ಸೇರಬಯಸುವ ಆಕಾಂಕ್ಷಿಗಳಿಗೆ ಐದು ವರ್ಷಗಳ ಮಿಲಿಟರಿ ಸೇವೆ ಕಡ್ಡಾಯ ಮಾಡಬೇಕೆಂದರ ಸಂಸದೀಯ ಸ್ಥಾಯಿ ಸಮಿತಿ ಸಲಹೆ ನೀಡಿದೆ.

ಈ ವಿಚಾರವಾಗಿ ಸಿಬ್ಬಂದಿ ಹಾಗು ತರಬೇತಿ ಇಲಖೆ ಪ್ರಸ್ತಾವನೆಯೊಂದನ್ನು ಸಲ್ಲಿಸಿ ಕೇಂದ್ರ ಸರಕಾರದ ಮುಂದೆ ಇಡಬೇಕೆಂದು ಸಮಿತಿ ಸೂಚಿಸಿರುವುದಾಗಿ ವರದಿಗಳು ಬಂದಿವೆ.

ಸರಕಾರೀ ಉದ್ಯೋಗದ ಆಕಾಂಕ್ಷಿಗಳಿಗೆ ಕಡ್ಡಾಯ ಐದು ವರ್ಷ ಮಿಲಿಟರಿ ತರಬೇತಿ ಮೂಲಕ ಸಶಸ್ತ್ರ ಪಡೆಗಳಲ್ಲಿರುವ ಸಿಬ್ಬಂದಿ ಕೊರತೆ ಸರಿದೂಗಿಸಿಕೊಳ್ಳಬಹುದು ಎಂದು ಸಮಿತಿ ತಿಳಿಸಿದೆ. ಎಲ್ಲ ಸರಕಾರೀ ನೌಕರರಿ ಕುರಿತ ಆಡಳಿತಾತ್ಮಕ ನಿರ್ಧಾರ ಹಾಗು ನೀತಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಸಿಬ್ಬಂದಿ ಹಾಗು ತರಬೇತಿ ಇಲಾಖೆ ಹೊತ್ತಿದೆ.

ಇದೇ ವೇಳೆ ಭಾರತೀಯ ಸೇನೆಯೊಂದರಲ್ಲೇ 7,000 ಕ್ಕೂ ಹೆಚ್ಚಿನ ಅಧಿಕಾರಿಗಳು ಹಾಗು 20,000ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದೆ.ನೌಕಾಪಡೆ ಹಾಗು ವಾಯುಪಡೆಯಲ್ಲಿ 150 ಅಧಿಕಾರಿಗಳು ಹಾಗು 15,000 ಸಿಬ್ಬಂದಿ ಕೊರತೆ ಕಂಡುಬಂದಿದೆ.

ಭಾರತೀಯ ರೈಲ್ವೇ ಸೇರಿದಂತೆ ಕೇಂದ್ರ ಸರಕಾರದಲ್ಲಿ ಸುಮಾರು 30 ಲಕ್ಷ ಉದ್ಯೋಗಿಗಳಿದ್ದರೆ ರಾಜ್ಯ ಸರಕಾರಗಳು ಎರಡು ಕೋಟಿ ಜನರಿಗೆ ಉದ್ಯೋಗ ನೀಡಿವೆ. ಮಿಲಿಟರಿ ಸೇವೆ ಬಳಿಕ ಆಕಾಂಕ್ಷಿಗಳ್ನು ಉದ್ಯೋಗಕ್ಕೆ ಸೇರಿಸಿಕೊಂಡಲ್ಲಿ ಸರಕಾರೀ ಇಲಾಖೆಗಳಲ್ಲಿ ಮತ್ತಷ್ಟು ಶಿಸ್ತು ಬರುವ ಸಾಧ್ಯತೆ ಇದೆ.

ಆದರೆ ಈ ಕುರಿತಂತೆ ರಕ್ಷಣಾ ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದ ಕಾರಣ ಇದೇ ವರದಿಯನ್ನು ಸಿಬ್ಬಂದಿ ಹಾಗು ತರಬೇತಿ ಇಲಾಖೆಗೆ ನೀಡಲಾಗಿದೆ.

Comments are closed.