ಕರ್ನಾಟಕ

ನಕಲಿ ನೋಟುಗಳ ದಂಧೆ: ಜನರ ಆತಂಕ

Pinterest LinkedIn Tumblr


ಗೋಣಿಕೊಪ್ಪಲು: ಪಟ್ಟಣದಲ್ಲಿ ನಕಲಿ ನೋಟುಗಳ ದಂಧೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. 200, 500 ಹಾಗೂ 2000 ರು.ಗಳ ನೂತನ ನೋಟ್‌ಗಳನ್ನು ಜೆರಾಕ್ಸ್ ಮಾಡುವ ನೋಟು ವಿತರಣಾ ದಂಧೆ ನಡೆಯುತ್ತಿದೆ. ಅಸಲಿ ನೋಟಿನ ನಡುವೆ ಜೆರಾಕ್‌ಸ್ ನೋಟೊಂದನ್ನು ಹಾಕಿ ನೀಡುತ್ತಿರುವುದು ಅಲ್ಲಲ್ಲಿ ಕಂಡುಬಂದಿದೆ.

ಸೋಮವಾರ ಸಂಜೆ ಸಮಯ ಆಟೋ ಚಾಲಕರೊಬ್ಬರಿಗೆ 200 ರು. ನೋಟಿನ ಜೆರಾಕ್ಸ್ ಒಂದು ದೊರೆತಿದೆ. 200 ರುಪಾಯಿಯ ಅಸಲಿ ನೋಟಿನ 6000 ರು. ಗಳ ನಡುವೆ ನಕಲಿ ಜೆರಾಕ್ಸ್ ನೋಟೊಂದು ಪತ್ತೆಯಾಗಿದೆ. ಪಟ್ಟಣದಲ್ಲಿ ಈ ರೀತಿಯ ಜೆರಾಕ್ಸ್ ನೋಟುಗಳನ್ನು ಚಲಾವಣೆ ಮಾಡುತ್ತಿರುವ ತಂಡವೊಂದು ಇರಬಹುದು ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ಪೋಲಿಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಜನರು ನೋಟಿನ ವಿಚಾರದಲ್ಲಿ ಜಾಗೃತರಾಗಬೇಕು.

Comments are closed.